ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ಯಾರ್ಥಿ : ವಿವೇಕಾನಂದ PU ಕಾಲೇಜಿಗೆ ಭೇಟಿ

Chandrashekhara Kulamarva
0



ಪುತ್ತೂರು: ಭಾರತೀಯ ಸೇನೆಯ 6  ಗಾರ್ಡ್ಸ್ ಯುನಿಟ್ ನ, ಬ್ರಿಗೇಡ್ ಆಫ್ ಗಾರ್ಡ್ಸ್ ರೆಜಿಮೆಂಟ್ ನಲ್ಲಿ ಲ್ಯಾನ್ಸ್  ನಾಯಕ್ ಆಗಿ ಪ್ರಸ್ತುತ ಸಿಕ್ಕಿಂ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷಿತ್ ಎಂ. ಅವರು ಇತ್ತೀಚಿಗೆ ಕಾಲೇಜಿಗೆ ಭೇಟಿ ನೀಡಿದರು. 


ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಇವರನ್ನು ಪ್ರಾಂಶುಪಾಲರಾದ  ದೇವಿಚರಣ್ ರೈ ಎಂ. ಇವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ, ಮುರಳಿ ಪಿ ಜಿ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್. ಅಂತೆಯೇ ಉಳಿದ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದು ಶುಭ ಹಾರೈಸಿದರು.





إرسال تعليق

0 تعليقات
إرسال تعليق (0)
To Top