ನೀಟ್- 2025: ಅಂಬಿಕಾ ಪದವಿ ಪೂರ್ವ ವಿದ್ಯಾಲಯ ವಿದ್ಯಾರ್ಥಿಗಳ ಅಮೋಘ ಸಾಧನೆ

Upayuktha
0

 ಅಂಬಿಕಾ ವಿದ್ಯಾರ್ಥಿಗೆ ರಾಷ್ಟ್ರಮಟ್ಟದಲ್ಲಿ 207ನೇ ರ‍್ಯಾಂಕ್, ತಾಲೂಕಿಗೆ ಪ್ರಥಮ.



ಪುತ್ತೂರು: ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನ ಫಲಿತಾಂಶ ಪ್ರಕಟವಾಗಿದ್ದು ಪುತ್ತೂರಿನ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿರುತ್ತಾರೆ.  


ಬಂಟ್ವಾಳ ಪೆರ್ನೆಯ ಚಂದ್ರಶೇಖರ ಮತ್ತು ವನಿತಾ ದಂಪತಿಯ ಪುತ್ರ ವಿಷ್ಣು ಪ್ರಸಾದ್ 586 ಅಂಕ, 207ನೇ ರ‍್ಯಾಂಕ್  ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.  ಕಾಸರಗೋಡಿನ ಕೂಡ್ಲು ನಿವಾಸಿ ಎಚ್. ರವಿಚಂದ್ರ ನಾಯಕ್ ಹಾಗೂ ಶ್ಯಾಮಲಾ ದಂಪತಿ ಪುತ್ರ ಎಸ್. ತೇಜಸ್ ನಾಯಕ್ (540 ಅಂಕ, 7800 ನೇ ರ‍್ಯಾಂಕ್),  ಮಡಿಕೇರಿಯ ಅಯ್ಯಣ್ಣ ಎಮ್.ಕೆ. ಮತ್ತು ಶರೀನ್.ಬಿ.ಬಿ. ದಂಪತಿಯ ಪುತ್ರ ಆರೀನ್ ಅಯ್ಯಪ್ಪ (530 ಅಂಕ, 9752ನೇ ರ‍್ಯಾಂಕ್) .


ಪುತ್ತೂರು ಆರ್ಯಾಪು ಇಲ್ಲಿಯ ಮಹಾಲಿಂಗೇಶ್ವರ ಭಟ್ ಎಂ. ಮತ್ತು  ಎಸ್. ವಿ. ದುರ್ಗಮಾಲಾ ದಂಪತಿ ಪುತ್ರಿ ಸ್ನೇಹಾ ಎಂ. (515 ಅಂಕ, 13789ನೇ ರ‍್ಯಾಂಕ್), ಬಂಟ್ವಾಳದ ಅಳಕೆ ಮಜಲಿನ ಡಾ. ಮಂದಾರ ಮತ್ತು ಅನುಪಮಾ ಎನ್. ದಂಪತಿ ಪುತ್ರಿ ಅನನ್ಯಾ ಎಸ್. ಜೈನ್ (515  ಅಂಕ, 14093ನೇ ರ‍್ಯಾಂಕ್ ), ಬಂಟ್ವಾಳ ಕರೋಪಾಡಿಯ  ಪಿ. ನಾರಾಯಣ ಭಟ್ ಹಾಗೂ ಜಯ ಶ್ರೀ ದಂಪತಿ ಪುತ್ರಿ ಪಾವನ (498 ಅಂಕ),  ಪುತ್ತೂರಿನ ನರಿಮೊಗರು ಇಲ್ಲಿಯ ರಘುನಾಥ ಎಸ್. ಮತ್ತು ತಾರಾ ಬಿ.ಸಿ. ದಂಪತಿ ಪುತ್ರ ತೇಜಸ್ ಎಸ್.ಆರ್. (490).


ಪುತ್ತೂರು ತೆಂಕಿಲದ ಡಾ. ಭಾಸ್ಕರ್ ಎಂ. ಮತ್ತು ಡಾ. ಸೌಮ್ಯ ಎಂ. ದಂಪತಿಯ ಪುತ್ರ ಧ್ಯಾನ್ ವಸಿಷ್ಠ ಎಂ. (474), ಪುತ್ತೂರು ಪಡುವನ್ನೂರಿನ ರವಿರಾಜ್ ಗೌಡ ಮತ್ತು ಲತಾ ದಂಪತಿಯ ಪುತ್ರ ಸುಮೀತ್ ರಾಜ್ (469), ಪುತ್ತೂರು ಬಪ್ಪಳಿಗೆಯ ಚಿದಾನಂದ ಪೂಜಾರಿ ಮತ್ತು ಶೋಭಾ ಎಂ. ದಂಪತಿಯ ಪುತ್ರಿ ಹಿಮಾನಿ ಎ.ಸಿ. (447), ಪುತ್ತೂರು ಆರ್ಯಾಪಿನ ಕೆ. ದಿನಕರ ಮತ್ತು ಬಿ. ಸುಮತಿ ದಂಪತಿಯ ಪುತ್ರ ಗೌರವ್ ಪಿ.ಡಿ. (443), ಬಂಟ್ವಾಳ ವಿಟ್ಲದ ಶಿವಾನಂದ ರೈ ಕೆ. ಮತ್ತು ದೀಪಾ ಎಸ್. ರೈ ದಂಪತಿಯ ಪುತ್ರ ಅನ್ವಿತ್ ರೈ ಕೆ. (437), ಬಂಟ್ವಾಳ ಅಡ್ಯನಡ್ಕದ ಕೆ.ಎಸ್. ನಾರಾಯಣ ಭಟ್ ಮತ್ತು ವಿದ್ಯಾ ಭಟ್ ಕೆ. ದಂಪತಿಯ ಪುತ್ರ ಸಾತ್ವಿಕ್ ಕೃಷ್ಣ ಕೆ.ಎನ್. (434) ಅಂಕದೊಂದಿಗೆ ವೈದ್ಯಕೀಯ ಕೋರ್ಸಿಗೆ ಅರ್ಹರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. 


ಕೆಲವು ವರ್ಷಗಳಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದ್ದು ಈ ವರ್ಷವೂ ನೀಟ್(NEET) ಪರೀಕ್ಷೆಯಲ್ಲಿ ಅಂಬಿಕಾದ ಸಾಧನೆ ಅಪಾರ. ಬಹುಜನ ಪೋಷಕರ ಅಪೇಕ್ಷೆಯಂತೆ ಈ ಶೈಕ್ಷಣಿಕ ವರ್ಷದಲ್ಲೂ ನೀಟ್ ರಿಪೀಟರ್ಸ್ ಬ್ಯಾಚ್ ಆರಂಭಿಸುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದ್ದು ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top