ಹಿಂದೂಗಳಿಗೆ ಪೊಲೀಸ್ ಕಿರುಕುಳ: ಮಾನವ ಹಕ್ಕು ಆಯೋಗಕ್ಕೆ ಶಾಸಕ ಡಾ.ಭರತ್ ಶೆಟ್ಟಿ ದೂರು

Upayuktha
0


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪೊಲೀಸ್ ಕೇಸು ಇಲ್ಲದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಹಿಂದೂ ಸಮಾಜದ  ಹಿರಿಯರು, ಯುವಕರು, ಮಹಿಳೆಯರನ್ನುವ ಗುರಿಯಾಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ವಿನಾಕಾರಣ ಮಧ್ಯರಾತ್ರಿಯ ಸುಮಾರಿಗೆ ಮಹಿಳೆಯರು ಮಕ್ಕಳು ಇರುವ ಮನೆಗಳಿಗೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಪ್ರವೇಶಿಸುವುದಲ್ಲದೆ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಫೋಟೋ ತೆಗೆದು ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಮೇರೆಗೆ ಆಯೋಗ ತನಿಖೆ ಆರಂಭಿಸಿದೆ.


ಮಂಗಳವಾರ ಶಾಸಕರನ್ನು ಭೇಟಿಯಾಗಿ ಆಯೋಗದ ತನಿಖಾ ತಂಡವು ಮೊದಲ ಹಂತದ ಮಾಹಿತಿಯನ್ನು ಪಡೆದುಕೊಂಡಿತು. ಈ ಸಂದರ್ಭ ಶಾಸಕರು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದವರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಮಾನಸಿಕವಾಗಿ ಆದಂತಹ ಆಘಾತ, ಕಿರುಕುಳ ಕುರಿತು ಸವಿವರವಾಗಿ ಮಾಹಿತಿ ಒದಗಿಸಿದ್ದಾರೆ.


ಆಯೋಗದ ತನಿಖಾ ತಂಡವು ಜಿಲ್ಲೆಯ ವಿವಿಧ ತಾಲೂಕುಗಳಿಗೆ ತೆರಳಿ ಕಿರುಕುಳಕ್ಕೊಳಗಾದ ಜನರಿಂದ ಮಾಹಿತಿ ಪಡೆಯಲಿದೆ. ಪೊಲೀಸ್ ಇಲಾಖೆಯಿಂದ ಆದ ಅನ್ಯಾಯದ ಕುರಿತಾಗಿ ಮಾಹಿತಿ ಪಡೆಯಲಿದೆ ಎಂದು ತಿಳಿದುಬಂದಿದೆ. ಆಯೋಗದ ತನಿಖಾ ತಂಡ ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ಆಯೋಗಕ್ಕೆ ವರದಿ ಸಲ್ಲಿಸಲಿದೆ ಎಂದು ಬಂದಿದೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top