ಕವನ: ವಿದ್ಯಾರ್ಥಿ ಜೀವನ

Chandrashekhara Kulamarva
0


ವಿದ್ಯಾರ್ಥಿ ಜೀವನವೇ ಸುಂದರ 

ಬದುಕೆನಿಸುವುದು ಒಲವಿನ ಹಂದರ

ವಿದ್ಯಾರ್ಜನೆ ಮಾಡುತ ಸಾಗುತ

ಎಲ್ಲರೊಂದಿಗೆ ಸ್ನೇಹದಿಂದ ಇರುತ


ಶಿಕ್ಷಕರ ಚೆಂದದ ಪಾಠಗಳ ಕೇಳುತ 

ಪ್ರಶ್ನೋತ್ತರ ಸರಮಾಲೆಗಳ ಎದುರಿಸುತ

ಜ್ಞಾನ ಭಂಡಾರ ಹೆಚ್ಚಿಸುತ 

ಲೋಕ ಜ್ಞಾನದ ಅರಿವು ಪಡೆಯುತ 


ಆಟ ಪಾಠಗಳಲೇ ಮನ ತಲ್ಲಿನ

ಬೇರೆ ವಿಚಾರಗಳೇ ಇಲ್ಲದ ಜೀವನ 

ಹೇಳುವರೆಲ್ಲರೂ ಅದಕೆ ಜನ

 ಬಂಗಾರದಂತೆ ವಿದ್ಯಾರ್ಥಿ ಜೀವನ 


ಮೊಗ್ಗಗಳಂತಿರುವ ಮನಗಳ 

ಹಿಗ್ಗಿಸಿ ಮಾಡುವುದು ಹೂವುಗಳ

ಹೂವುಗಳ ಸುವಾಸನೆ ಪಸರಿಸಿ

ವ್ಯಾಪಿಸಿ ಜೀವನ ಸಾರ್ಥಕವಾಗಿಸಿ 


ಜ್ಞಾನ ದೇಗುಲಕೆ ನಮಿಸಿ 

ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿ

ಅವರ ಉಪಕಾರ ಸ್ಮರಿಸಿ 

ಸುಂದರ ಜೀವನ  ನಡೆಸಿ 


- ರೇಖಾ ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top