ಉಜಿರೆ: ಎಸ್‌ಡಿಎಂ ಪ.ಪೂ. ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಪುನಃಶ್ಚೇತನ ತರಬೇತಿ

Upayuktha
0



ಉಜಿರೆ: ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಡಿ ಎಂ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀನಾರಾಯಣರವರು ಎನ್‌ಎಸ್‌ಎಸ್ ನ ಧ್ಯೇಯ, ಉದ್ದೇಶ ಕಾರ್ಯಕ್ರಮ ಮುಂತಾದ ವಿಷಯಗಳ ಕುರಿತು ತಿಳಿಸಿಕೊಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ.ರವರು "ಎನ್ಎಸ್ಎಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒಂದು ಅವಕಾಶವಾಗಿದ್ದು, ಸ್ವಯಂ ಸೇವಕರಾಗಿ ಇಲ್ಲಿ ತಮ್ಮನ್ನು ಸರಿಯಾಗಿ  ತೊಡಗಿಸಿಕೊಂಡಾಗ ನಿಜವಾದ ವ್ಯಕ್ತಿತ್ವ ಮೂಡಿಸಿಕೊಳ್ಳಲು ಸಾಧ್ಯ" ಎಂದು ಹೇಳಿದರು.


ವೇದಿಕೆಯಲ್ಲಿ ಎನ್ಎಸ್ಎಸ್ ನಿಕಟಪೂರ್ವ ಯೋಜನಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್ ಐತಾಳ್, ಯೋಜನಾಧಿಕಾರಿಗಳಾದ ವಿಶ್ವನಾಥ್  ಎಸ್., ಸಹಯೋಜನಾಧಿಕಾರಿ ಶೋಭಾ ಪಿ  ಉಪಸ್ಥಿತರಿದ್ದರು. 


ಸ್ವಯಂ ಸೇವಕಿ  ಮೌಲ್ಯ ಅತಿಥಿಗಳ ಪರಿಚಯಿಸಿದರು. ಸ್ವಯಂ ಸೇವಕರಾದ  ಸಂತೋಷ್ ನಿರೂಪಿಸಿ, ಸಂದೀಪ್ ಸ್ವಾಗತಿಸಿ ಸ್ವಯಂಸೇವಕಿ ಪಲ್ಲವಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top