ಡಾ.ಎನ್. ಎಸ್. ಎ. ಎಮ್ PU ಕಾಲೇಜಿನಲ್ಲಿ ಪರಿಣಾಮಕಾರಿ ಕಲಿಕಾ ವಿಧಾನಗಳ ಕುರಿತು ಕಾರ್ಯಗಾರ

Upayuktha
0



ನಿಟ್ಟೆ:  ಡಾ.ಎನ್. ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನಲ್ಲಿ ಜೂ.17 ಮತ್ತು 18 ರಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸ್ಟಾಫ್ ಡೆವಲಪ್ಮೆಂಟ್ ಸೆಂಟರ್ ಮತ್ತು ಐಕ್ಯೂಎಸಿಗಳ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಪರಿಣಾಮಕಾರಿ ಕಲಿಕಾ ವಿಧಾನಗಳ ಕುರಿತ ಕಾರ್ಯಗಾರವನ್ನು ಬೋಧಕ ಸಿಬ್ಬಂದಿಗಳಿಗೆ ಆಯೋಜಿಸಲಾಗಿತ್ತು.


ಕೋವಿಡ್ ನಂತರದ ವಿದ್ಯಾರ್ಥಿಗಳ ಮನಸ್ಥಿತಿಯಲ್ಲಿನ ಬದಲಾವಣೆಗಳು, ಕಲಿಕಾ ತಾಂತ್ರಿಕತೆಯಲ್ಲಿ ಆದ ಬೆಳವಣಿಗೆಗಳು ಸಾಂಪ್ರದಾಯಿಕ ಕಲಿಕಾ ವಿಧಾನಗಳಿಗಿಂತ ಭಿನ್ನವಾದ ಮತ್ತು ಪರಿಣಾಮಕಾರಿ ಕಲಿಕಾ ವಿಧಾನಗಳನ್ನು ವಿದ್ಯಾರ್ಥಿ ಸಮುದಾಯ ಅಪೇಕ್ಷಿಸುತ್ತಿದೆ. ಈ ಹಿನ್ನಲೆಯಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವು ಬೋಧಕ ಸಿಬ್ಬಂದಿಗಳಿಗೆ ನಿರಂತರವಾಗಿ ಸಿಬ್ಬಂದಿಗಳ ಅಭಿವೃದ್ದಿ ವಿಭಾಗದಿಂದ ನವೀನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ‘ಇ-ಕಲಿಕಾ’ ಸಾಮಾಗ್ರಿಗಳನ್ನು ಪೂರೈಸುವ ಕಡೆಗೂ ಗಮನವನ್ನು ಹರಿಸುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ. ಕಾರ್ಯಗಾರದ ಉದ್ಘಾಟನಾ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.


ಈ ನೆಲೆಯಲ್ಲಿ ನಡೆದ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಗ್ರೇನಲ್ ಡಿ ಮೆಲ್ಲೋ, ಸಹಪ್ರಾಧ್ಯಾಪಕರು ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ, ಪ್ರಜ್ವಲ್ ಹೆಗ್ಡೆ, ಸಾಹಾಯಕ ಪ್ರಾಧ್ಯಪಕರು ಎನ್.ಎಮ್.ಎ.ಎಮ್.ಐ.ಟಿ ನಿಟ್ಟೆ, ಪ್ರದೀಪ್ ಕುಮಾರ್ ಸಾಹಾಯಕ ಪ್ರಾಧ್ಯಪಕರು ಎನ್.ಎಮ್.ಎ.ಎಮ್.ಐ.ಟಿ, ನಿಟ್ಟೆ ಇವರು ಪಾಲ್ಗೊಂಡರು. ಪ್ರಸ್ತುತ ಕಾರ್ಯಗಾರದಲ್ಲಿ ಅಧ್ಯಾಪಕರಿಗೆ 'ಇ ಕಲಿಕಾ' ಸಾಮಾಗ್ರಿಗಳ ತಯಾರಿ, ಮೌಲ್ಯಮಾಪನ, ಹಾಗೂ ಬೋಧನಾ ವಿಧಾನದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಳ ಕುರಿತು ತರಬೇತಿಯನ್ನು ನೀಡಿದರು. 


‘ಎನ್.ಯು ಲರ್ನಿಂಗ್’ ನಲ್ಲಿ ಮಾದರಿ ತರಗತಿಗಳನ್ನು ರೂಪಿಸಲು ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಬಿ.ಕೆ ಉಪಸ್ಥಿತರಿದ್ದರು. ಕಾಲೇಜಿನ ಎಸ್.ಡಿ.ಸಿ. ಸಂಯೋಜಕ ಡಾ. ರಾಘವೇಂದ್ರ ರಾವ್ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಡಾ.ಎನ್.ಎಸ್.ಎ.ಎಮ್ ಪ್ರಥಮದರ್ಜೆ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯಗಾರದಲ್ಲಿ ಪಾಲ್ಗೊಂಡರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top