ಪ್ರಕೃತಿ ಹಾಗೂ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧ: ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ

Chandrashekhara Kulamarva
0

ತುಲುವೆರೆ ಕಲ ವರ್ಸೋಚ್ಚಯ

 



ಮಂಗಳೂರು: ಸಾಹಿತ್ಯ ಹಾಗೂ ಪ್ರಕೃತಿ ಒಂದಕ್ಕೊಂದು ಪೂರಕ. ಸನಾತನ ಸಂಸ್ಕೃತಿ, ಪ್ರಕೃತಿ, ಭಾಷೆ ಹಾಗೂ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಇದರ ಉಳಿವಿಗೆ ಪ್ರಯತ್ನ ಅಗತ್ಯ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನುಡಿದರು.


ತುಲುವೆರೆ ಕಲ ಇದರ ವತಿಯಿಂದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಭಾಂಗಣದಲ್ಲಿ ಜರುಗಿದ ತುಳು  ವರ್ಸೋಚ್ಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಜಗತ್ತಿನಲ್ಲಿ ಎಲ್ಲೂ ಇಲ್ಲದ ಸಾಂಸ್ಕೃತಿಕ ವೈಶಿಷ್ಟೃ ತುಳುನಾಡಿನಲ್ಲಿದೆ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗಬೇಕು. ಭಾಷೆ, ಸಂಸ್ಕೃತಿಯ ಅಭಿಮಾನದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.


ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಮಲಾರ್ ಜಯರಾಮ ರೈ, ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಡಾ. ಮಾಧವ ಎಂ.ಕೆ., ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ್ ರೈ, ಕೋಟಿ ಚೆನ್ನಯ ಸೇವಾ ಬ್ರಿಗೇಡ್‌ನ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ನಾಡು, ನುಡಿ, ಸಂಸ್ಕೃತಿಯ ಉಳಿವಿನಲ್ಲಿ ಭಾಷೆಯ ಮಹತ್ವ ಕುರಿತು ಡಾ.ಅರುಣ್ ಉಳ್ಳಾಲ್, ತುಳುನಾಡಿನ ಸಾಹಿತ್ಯ ಪರಂಪರೆ ಕುರಿತು ತುಲು ಕಲ್ಚರ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಮಹಿ ಮೂಲ್ಕಿ ಉಪನ್ಯಾಸ ನೀಡಿದರು. ಕವಿ ರಾಜೇಶ್ ಶೆಟ್ಟಿ ದೋಟ ಮತ್ತು ಶ್ರೀ ಶಾವಾಸವಿ ತುಳುನಾಡ್ ಇವರಿಗೆ ಕಲತ ಬೊಳ್ಳಿ ಗೌರವ ಪ್ರದಾನಿಸಲಾಯಿತು. ರೇಣುಕಾ ಕಣಿಯೂರು ಮತ್ತು ನವೀನ್ ಕುಮಾರ್ ಪೆರಾರ ಕಾರ್ಯಕ್ರಮ ನಿರೂಪಿಸಿದರು.



ಆರು ತುಳು ಕೃತಿ ಬಿಡುಗಡೆ

ಕಾರ್ಯಕ್ರಮದಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು ಅವರ ರುಪಾಯಿ ನೋಟು, ಅಶೋಕ ಎನ್.ಕಡೇಶಿವಾಲಯ ಅವರ ಬದ್ಕ್ ಭಾಗ್ಯೊದ ಬೊಲ್ಪು, ರಕ್ಷಿತ್ ಬಿ.ಕರ್ಕೇರ ಅವರ ಮಾಯ್ಕದ ಮೆನ್ಪುರಿ, ಉಮೇಶ್ ಶಿರಿಯ ಅವರ ಮಲ್ಲಿಗೆದ ಜಲ್ಲಿ ಹಾಗೂ ಸಂಪಿಗೆದ ಕಮ್ಮೆನ, ಪದ್ಮನಾಭ ಪೂಜಾರಿ ನೇರಂಬೋಳು ಅವರ ಎಸಲ ಪನಿ ಕೃತಿ ಬಿಡುಗಡೆಗೊಂಡಿತು.


ಬಾನದಾರಗೆ ಕವಿಗೋಷ್ಠಿ

ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಸದಾನಂದ ನಾರಾವಿ, ರಘು ಇಡ್ಕಿದು, ಕುಶಾಲಾಕ್ಷಿ ವಿ. ಕಣ್ವತೀರ್ಥ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಅನುರಾಧಾ ರಾಜೀವ್ ಸುರತ್ಕಲ್, ವಿಜಯಲಲಕ್ಷ್ಮಿ ಕಟೀಲ್ ಇವರುಗಳನ್ನು ಸನ್ಮಾನಿಸಲಾಯಿತು. ಬಳಿಕ ಸಾಹಿತಿ ಶಾಂತಾರಾಮ್ ವಿ.ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಬಾನದಾರೆ ಕವಿಕೂಟ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top