ವೈದ್ಯರ ದಿನಾಚರಣೆ: ಸಮಾಜದ ಆರೋಗ್ಯ ರಕ್ಷಕರಿಗೆ ನಮೋ

Upayuktha
0

 




ವೈದ್ಯೋ ನಾರಾಯಣೋ ಹರಿ ಎಂಬಂತೆ ಭೂಮಿ ಮೇಲಿನ ದೇವರು ಎಂದರೆ ಅದು ವೈದ್ಯರು ಎಂಬ ಮಾತಿಗೆ. ಈ ಮೂಲಕ ವೈದ್ಯರ ಸೇವೆಗೆ ಗೌರವವನ್ನು ನಾವೆಲ್ಲರೂ ಸಲ್ಲಿಸಬೇಕಾದದ್ದು ನಮ್ಮ ಕತ೯ವ್ಯವಾಗಿದೆ. ರೋಗಿಗಳ ಜೀವ ಉಳಿಸುವ ಸಲುವಾಗಿ ಪ್ರತಿ ಕ್ಷಣವೂ ಎಂತಹ ಪರಿಸ್ಥಿತಿಯಲ್ಲಿ ನಿಸ್ವಾರ್ಥವಾಗಿ ಉತ್ತಮ ಸೇವೆಯನ್ನು ವೈದ್ಯರು ನೀಡುತ್ತಾರೆ. ವ್ಯಕ್ತಿಯೊಬ್ಬ ತನ್ನ ದೇಹದ ಬಗ್ಗೆ ಸಂಪೂರ್ಣ ಅಸಹಾಯಕತೆ ಹೊಂದಿದಾಗ ಆತ ಗುಣಮುಖವಾಗುವ ಭರವಸೆಯೊಂದಿಗೆ ವೈದ್ಯರ ಬಳಿ ಹೋಗುತ್ತಾನೆ. ಔಷಧಗಳು ರೋಗಗಳನ್ನು ಗುಣಪಡಿಸಿದರೆ, ವೈದ್ಯ ರೋಗಿಯನ್ನು ಗುಣಪಡಿಸುತ್ತಾನೆ ಎಂಬ ಮಾತಿದೆ. ಅದರಂತೆ ವೈದ್ಯರ ಈ ಸೇವೆ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.


ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಣೆ ಮಾಡುವ ಹಿಂದೆ ಒಂದು ಪ್ರಮುಖ ಕಾರಣವೂ ಇದೆ. ಇದು ಭಾರತದ ಶ್ರೇಷ್ಠ ವೈದ್ಯರಲ್ಲಿ ಒಬ್ಬರಾದ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ ಬಿಧಾನ್​ ಚಂದ್ರ ರಾಯ್​ ಅವರಿಗೆ ಗೌರವ ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಡಾ ರಾಯ್​ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದು, ಬಂಗಾಳದ ದೂರದೃಷ್ಟಿಯ ನಾಯಕತ್ವಕ್ಕಾಗಿ ಬಂಗಾಳದ ವಾಸ್ತುಶಿಲ್ಪಿ ಎಂದು ಕೂಡ ಕರೆಯಲ್ಪಡುತ್ತಾರೆ. ಡಾ ರಾಯ್​ ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಗೂ 1961ರಲ್ಲಿ ಭಾಜನರಾದರು. ಭಾರತ ಸರ್ಕಾರ 1991ರಿಂದ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆರಂಭಿಸಲು ಘೋಷಿಸಿತು.


ಎರಡು ವಷ೯ ಹಿಂದೆ ಜಗತ್ತು ಕೊರೊನಾ ಸಾಂಕ್ರಾಮಿಕತೆಯಿಂದ ಬಳಲುತ್ತಿದ್ದಾಗ, ವಾರದ 7ದಿನ ದಿನದ 24 ಗಂಟೆಯೂ ಸೇವೆ ನೀಡಿದ ವೈದ್ಯರು ಸಾವಿರಾರು ಜೀವ ಉಳಿಸಲು ಹೋರಾಡಿದರು. ಇಡೀ ಜಗತ್ತು ಸೋಂಕಿನ ಭಯದಲ್ಲಿದ್ದಾಗ, ಈ ಭಯವನ್ನು ಮರೆತು ಅವರು ರೋಗಿಗಳ ಚಿಕಿತ್ಸೆಗೆ ಮುಂದಾದರು. ಈ ಸಂದರ್ಭದಲ್ಲಿ ವೈದ್ಯರು ನಿರ್ವಹಿಸಿದ್ದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.


ಜಗತ್ತಿನಲ್ಲಿ ಅತ್ಯಂತ ಕ್ಲಿಷ್ಟಕರ ಉದ್ಯೋಗದಲ್ಲಿ ವೈದ್ಯ ವೃತ್ತಿ ಒಂದಾಗಿದ್ದು, ಉದಾತ್ತ ಹುದ್ದೆಗಳಲ್ಲಿ ಒಂದಾಗಿದೆ. ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹಗಲಿರುಳು ಜನರ ಸೇವೆ ಸಿದ್ದವಾಗಿರುವ ಇಂತಹ ವೈದ್ಯರ ಸೇವೆ ಪ್ರಶಂಸೆ ಮಾಡಲು ಒಂದು ದಿನ ಸಾಕಾಗುವುದಿಲ್ಲ. ಅವರ ಸೇವೆ ಎಷ್ಟು ಬಾರಿ ನೆನೆದರೂ ಕಡಿಮೆಯೇ ಸಮಾಜದಲ್ಲಿ ವೈದ್ಯರ ಪ್ರಾಮುಖ್ಯತೆಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ದಿನ ಅವರಿಗೆ ಗೌರವ ಸಮರ್ಪಣೆ ಜೊತೆ ವಿವಿಧ ಕಾರ್ಯಗಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜನೆ ಮಾಡಲಾಗುತ್ತಿದೆ. 


ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ ಮಾಡಲಾಗುತ್ತಿದೆ. ಇನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ವೈದ್ಯರ ದಿನವನ್ನು ಬೇರೆ ದಿನದಂದು ಆಚರಿಸಲಾಗುತ್ತದೆ.


ನಿಜವಾದ ಆಪ್ತರಕ್ಷಕರು:


ಉಸಿರಾಟ ಏರುಪೇರಾ ದಾಗ, ದೇಹಕ್ಕೆ ಸಂಕಟ ಒದಗಿದ ಸಂದಭ೯ದಲ್ಲಿ ನಮಗೆ ತಕ್ಷಣ ನೆನಪಾಗುವುದು ವೈದ್ಯರು.ಪ್ರಸ್ತುತ ಸನ್ನಿವೇಶದಲ್ಲಿ ಈ ವೈದ್ಯರ ಸೇವೆ ಅನನ್ಯ ಅಮೋಘವಾಗಿದೆ. ಅವರ ಖಾಸಗಿ ಬದುಕನ್ನು ಬದಿಗಿರಿಸಿ ರೋಗಿಗಳ ಆರೋಗ್ಯ ರಕ್ಷಣೆಗೆ ಅದೆಲ್ಲವನ್ನು ತ್ಯಾಗ ಮಾಡಿ ಜೀವನ ನಡೆಸುತ್ತಿರುವ ಎಲ್ಲಾ ವೈದ್ಯರು ಅಭಿನಂದನಾಹ೯ರು.


ಭಗವಂತನು ವೈದ್ಯರ ರೂಪದಲ್ಲಿ ನಮ್ಮೆಲ್ಲರನ್ನು ರಕ್ಷಣಿ ಮಾಡುತ್ತಿವನು ಹೀಗಾಗಿ ವೈದ್ಯರ ಆರೋಗ್ಯಕ್ಕೆ ನಾವು ದೇವರಲ್ಲಿ ಪ್ರಾಥ೯ನೆ ಮಾಡಬೇಕು.


ವೈದ್ಯರು ಚಿಕಿತ್ಸೆ ಸಂದರ್ಭದಲ್ಲಿ ಏನಾದರೂ ತೊಂದರೆ ಕಂಡು ಬಂದಾಗ ರೋಗಿಯ ಕುಟುಂಬಸ್ಥರು ವೈದ್ಯರಿಗೆ ನೀಡುತ್ತಿರುವ ತೊಂದರೆ ಅವಮಾನ ಹೇಳುತಿರದು ಆದರೂ ಕೂಡ ವೈದ್ಯರು ತಾವು ಮಾಡುತ್ತಿರುವ ಕರ್ತವ್ಯವನ್ನು ಅದು ಕೂಡ ಜನರ ಪ್ರಾಣ ಉಳಿಸುವ ಮಹತ್ವಪೂರ್ಣ ಕಾರ್ಯವನ್ನು ಚಾಚು ತಪ್ಪದೇ ಮಾಡುತ್ತಿರುವುದು ನಿಜವಾಗಿಯೂ ಅಭಿನಂದನೀಯವಾಗಿದೆ.


ಪ್ರತಿದಿನ ವೈದ್ಯರ ಸೇವೆಗೆ ನಮ್ಮ ಕೃತಜ್ಞತೆ ಅರ್ಪಿಸೋಣ:


ವೈದ್ಯರ ದಿನಾಚರಣೆಯಂದು ಮಾತ್ರ ವೈದ್ಯರಿಗೆ ಕೃತಜ್ಞತೆ ಅರ್ಪಿಸಿದರೆ ಸಾಲದು, ಅವರು ಮಾಡುತ್ತಿರುವ ಈ ಅಮೋಘ ಕಾರ್ಯಕ್ಕೆ ಪ್ರತಿದಿನ ಕೂಡ ನಾವು ಕೃತಜ್ಞತೆ ಸಲ್ಲಿಸಬೇಕು.


ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರು ಸ್ವರೂಪಿಯಾಗಿ ಕಾಣಿಸುತ್ತಾರೆ. ನಮಗೆ ಏನಾದರೂ ಆದಾಗ ಅಥವಾ ನಮ್ಮ ಆಪ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವರನ್ನು ಬದುಕಿಗೆ ಮರಳಿ ತರುವ, ನಮ್ಮ ಬದುಕಿನಲ್ಲಿ ಭರವಸೆ ತುಂಬುವ, ಸಂತೋಷಕ್ಕೆ ಕಾರಣವಾಗುವ ವೈದ್ಯರು ನಮಗೆ ದೇವರ ಸಮನಾಗಿರುತ್ತಾರೆ.


ವೈದ್ಯರು ಹಲವಾರು ಮಂದಿಯ ಜೀವ ರಕ್ಷಣೆಯೊಂದಿಗೆ ಸಾವಿರಾರು ಮಂದಿ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ (ಅರೆ ವೈದ್ಯಕೀಯ, ವೈಧ್ಯಕೀಯ ಪ್ರತಿ ನಿಧಿಗಳ)ಜೀವನವನ್ನು ರೂಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.


ಒಟ್ಟಾಗಿ ಈ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಹಾಗೂ ಸಮಾಜದ ನಿಜವಾದ ರಕ್ಷಣೆ ಮಾಡುವ ನಮ್ಮ ರಕ್ಷಕರಿಗೆ ವೈದ್ಯ ದಿನಾಚರಣೆಯ ಶುಭ ಹಾರೈಕೆಗಳು


- ರಾಘವೇಂದ್ರ ಪ್ರಭು ಕರ್ವಾಲು

ವೈದ್ಯಕೀಯ ಪ್ರತಿನಿಧಿ, ಲೇಖಕ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top