ಇಹಪರದ ಸಾಧನಕೆ 'ಹಲಸೆ' ಕಾರಣ !

Chandrashekhara Kulamarva
0


ಬಾಲ ಹಲಸು ಪಲ್ಯ ಮಾಡಿ

ಅನ್ನದೊಳಗೆ ಕಲಸಲು

ಬಾಲ್ಯದಲ್ಲಿ ಮಾಡಿದಂತ

ಪಾಪವೆಲ್ಲ ಕಳೆವುದು


ಹರಯ ಹಲಸು ಚರ್ಮ ಸುಲಿದು

ಹುಳಿಯ ಮಾಡಿ ತಿಂದರೆ

ಚರ್ಮ ರೋಗ ಬಾರದಂತೆ

ಚರಮ ಕಾಲ ಬಂದರು


ಬಲಿತ ಕಾಯಿ ಸೊಳೆಯ ಬೇಯಿಸಿ

ಹಪ್ಳ ಒತ್ತಿ ಒಣಗಿಸಿ

ಸಾವು ಬಾರದಂತೆ ನರಗೆ

ಸಾರಿನೊಡನೆ ಸವಿದರೆ


ಶಬ್ದ ಮಾಡದಂತೆ ಕರಿದ

ಚಿಪ್ಸು ಹೆಚ್ಚು ತಿಂದರೆ

ಸ್ವರ್ಗ ಲೋಕದಲ್ಲು ಕೂಡ

ವಾತ ಪಿತ್ತ ತೊಂದರೆ


ಹಣ್ಣು ಸುಲಿದು ಬೆಲ್ಲ ಬೆರೆಸಿ

ಹಿಟ್ಟು ರುಬ್ಬಿಕೊಂಡರೆ

ದಾನದಂತೆ ದೋಸೆ ಕೂಡ

ಅತಿಥಿ ಕೂಡೆ ತಿಂದರೆ


ತೀರಿ ಹೋದ ಹಿರಿಯರೆಲ್ಲ

ತೃಪ್ತಿಯಿಂದ ಹರಸಲು

ತುಪ್ಪದಲ್ಲೆ ಮುಳುಕ ಮಾಡಿ

ತಿಥಿಯ ದಿನವು ಬಡಿಸಲು


ಅಜ್ಜಿ ಚರ್ಮದಂತೆ ಆಗಿ

ಮೂಲೆಯಲ್ಲಿ ನಲುಗಿದ

ಬೀಜಗಳಿಗೆ ಮುಕ್ತಿ ಯೋಗ

ತಿಂದ ಮನುಜನುದರದಿ


ಹಲಸು ಬಾಗಿಲಲ್ಲಿ ನಿತ್ಯ

ಬಾಗಿ ಬಾಗಿ ನೆಡೆದರೆ

ಮನಸಿಗ್ಯಾವ ರೋಗ ಬರದು

ಯಾರು ಏನೊ ನುಡಿದರೆ 


ಹಲವು ತರದಿ ಪಾಪ ಕಳೆವ 

ಹಲಸು ಕಲ್ಪ ವೃಕ್ಷವು

ಗಿಡವನೊಂದು ನೆಟ್ಟು ಬೆಳಸಿ

ಸತ್ಯವಂತೆ ಮೋಕ್ಷವು


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top