ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಪ್ರಾರ್ಥನೆ, ಸೀಯಾಳ ಅಭಿಷೇಕ

Upayuktha
0


ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ಸೋಮವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಕದ್ರಿಯಲ್ಲಿ "ಸಾಮೂಹಿಕ ಪ್ರಾರ್ಥನೆಯೊಂದಿಗೆ ಸೀಯಾಳ ಅಭಿಷೇಕ" ವನ್ನು ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದೊಂದಿಗೆ ಹತ್ತು ಸಮಸ್ತರ ಸಹಕಾರದೊಂದಿಗೆ ನಡೆಸಲಾಯಿತು.


ಸಂಸದ ಕ್ಯಾ| ಬ್ರಿಜೇಶ್ ಚೌಟ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರರ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಪ್ರೀತಾ ನಂದನ್ ಕದ್ರಿ, ಉಷಾ ಪ್ರಭಾಕರ್ ಮೇರಿಹಿಲ್, ದಿಲ್ ರಾಜ್ ಆಳ್ವ ಮಂಗಳಾದೇವಿ, ಹರಿನಾಥ ಜೋಗಿ ಕಾವೂರು, ರಾಜೇಂದ್ರ ಚಿಲಿಂಬಿ, ನಾರಾಯಣ ಕೋಟ್ಯಾನ್, ಹೊೖಗೆಬಜಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಮೊೖಲಿ ಕುಡುಪು, ವಿಶ್ವಹಿಂದು ಪರಿಷತ್ತಿನ ಎಚ್.ಕೆ ಪುರುಷೋತ್ತಮ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ| ವಾಮನ ಶೆಣೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಚಂದ್ರಕಲಾ ದೀಪಕ್ ರಾವ್, ಜೋಗಿ ಸಮಾಜದ ಅಧ್ಯಕ್ಷ ಕಿರಣ್ ಕುಮಾರ್, ರಾಮಕೃಷ್ಣ ರಾವ್, ಮಾಜಿ ಕಾರ್ಪೊರೇಟರ್ ಮನೋಹರ ಶೆಟ್ಟಿ, ಶಕಿಲಾ ಕಾವ, ಉದ್ಯಮಿ ರತ್ನಾಕರ ಜೈನ್, ಡಾ. ಎಂ. ಪ್ರಭಾಕರ ಜೋಶಿ, ಸುಂದರ ಶೆಟ್ಟಿ, ಕರುಣಾಕರನ್, ರವೀಂದ್ರ ಶೆಟ್ಟಿ, ಪ್ರಭಾಕರ ಶರ್ಮ, ಗೀತಾ ಸರಳಾಯ, ಪೂರ್ಣಿಮಾ ಪೇಜಾವರ, ಸುಮಾ ಪ್ರಸಾದ್, ಎಂ.ಬಿ ಪುರಾಣಿಕ್ ಸಹಿತ ಅನೇಕ ಗಣ್ಯರು, ಹತ್ತು ಸಮಸ್ತರು ಉಪಸ್ಥಿತರಿದ್ದರು.


ದೇವಳದ ಅರ್ಚಕರಾದ ಡಾ.ಪ್ರಭಾಕರ ಅಡಿಗರಿಂದ ದೇವತಾ ಪ್ರಾರ್ಥನೆ, ವಿದ್ವಾನ್ ರಾಘವೇಂದ್ರ ಭಟ್, ವೇ|ಮೂ| ರವಿ ಅಡಿಗ, ರಾಘವೇಂದ್ರ ಅಡಿಗ, ರಾಮ ಹೊಳ್ಳ ಏಕಾದಶ ರುದ್ರಾಭಿಷೇಕ ಮೂಲಕ ಸೀಯಾಳಾಭಿಷೇಕ ನಡೆಸುವಲ್ಲಿ ಸಹಕರಿಸಿದರು.


ಕಾರ್ಯಕ್ರಮ ಸಂಯೋಜಿಸಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧಾಕರ ರಾವ್ ಪೇಜಾವರ ವಂದಿಸಿದರು. ಅಭಿಷೇಕಕ್ಕೆ ಬೇಕಾಗುವ ಸೀಯಾಳವನ್ನು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ತಂದೊಪ್ಪಿಸಿ ಕೃತಾರ್ಥರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top