ಯೋಗವು ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವ ಒಂದು ವಿಧಾನವಾಗಿದೆ : ಸ್ವಾಮಿ ಜಿತಕಾಮಾನಂದ ಮಹರಾಜ್

Chandrashekhara Kulamarva
0

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ವಹಣೆ ವಿಭಾಗ, ಎನ್.ಸಿ.ಸಿ., ಎನ್.ಎಸ್.ಎಸ್., ವೈ.ಆರ್.ಸಿ., ದೇಲಂಪಾಡಿ ಯೋಗ ಪ್ರತಿಷ್ಠಾನ ಮತ್ತು ಡಿಕತ್ಲಾನ್ ಸಹಯೋಗದೊಂದಿಗೆ  ಯೋಗ ಫಾರ್ ಒನ್ ಅರ್ಥ್ ಒನ್ ಹೆಲ್ತ್ ಎಂಬ ಧ್ಯೇಯವಾಕ್ಯದಲ್ಲಿ 11ನೇ ಅಂತರಾಷ್ಟ್ರಿಯ ಯೋಗ ದಿನಾಚರಣೆಯನ್ನು ಆಯೋಜಿಸಲಾಯಿತು.


ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಮಹರಾಜ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದಲ್ಲಿ ಹುಟ್ಟಿಕೊಂಡ ಯೋಗವನ್ನು   ಇಂದು ಬಹುತೇಕ ರಾಷ್ಟ್ರದ ಜನರು ಅಭ್ಯಾಸ ಮಾಡುತ್ತಿದ್ದಾರೆ. ಯೋಗವು ಸಮಗ್ರ ವ್ಯಕ್ತಿತ್ವವನ್ನು ಬೆಳೆಸುವ ಒಂದು ವಿಧಾನವಾಗಿದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ದೇಹ ಮನಸ್ಸು ಮತ್ತು ಶಕ್ತಿ ಸಮತೋಲನಗೊಳ್ಳುತ್ತದೆ ಎಂದರು.


ವಿವಿ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು. ಒತ್ತಡ ಕಡಿತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದರು. ಯೋಗ ದೇಹ ಮತ್ತು ಬುದ್ಧಿಯ ನಡುವೆ ಸಮತೋಲನವನ್ನು ಹೊಂದಿಸಿಕೊಂಡು ಮನಸ್ಸಿಗೆ ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ಕೊಡಬಲ್ಲುದು ಎಂಬುದಾಗಿ ತಿಳಿಸಿದರು. ಸಂತ ಅಲೋಶಿಯಸ್ ವಿವಿ ವಿದ್ಯಾರ್ಥಿಗಳ ಯೋಗ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು.


ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ನಿರ್ದೇಶಕಿ ನೀತಾ ಶೆಟ್ಟಿ ಯೋಗಾಸನಗಳನ್ನು ಮಾಡಲು ಸೂಕ್ತ ಮಾರ್ಗದರ್ಶನ ನೀಡಿದರು. ಇವರೊಂದಿಗೆ ವಿವಿಯ ಯೋಗ ವಿದ್ಯಾರ್ಥಿಗಳಾದ ರೋಶನಿ ಶೆಣೈ ಹಾಗೂ ಸಾನ್ವಿ ಶೆಟ್ಟಿ ಸಹಕರಿಸಿದರು.


ವಿವಿಯ ಅನೇಕ ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಎನ್.ಸಿ.ಸಿ. ಕೆಡೆಟ್ ಗಳು, ಎನ್. ಸ್. ಸ್. ವಿದ್ಯಾರ್ಥಿಗಳು, ವೈ.ಆರ್.ಸಿ. ವಿದ್ಯಾರ್ಥಿಗಳು ಹಾಗೂ ಯೋಗ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಕುಲಸಚಿವರುಗಳಾದ ಡಾ. ಆಲ್ವಿನ್ ಡೇಸಾ ಹಾಗೂ ಡಾ. ರೊನಾಲ್ದ್ ನಜರೆತ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಈಶ್ವರ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್ ಡಿಸೋಜ ವಂದಿಸಿದರು. ರೋಶನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top