ಮಹಾವೀರ ಜೈನ್ ಅವರಿಗೆ ಪಿಹೆಚ್.ಡಿ ಪದವಿ

Upayuktha
0

 


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ  ಮಹಾವೀರ ಜೈನ್ ಇಚ್ಲಂಪಾಡಿ ಇವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ. 


ಉಜಿರೆಯ ಡಾ. ಹಾಮಾನಾ ಸಂಶೋಧನಾ ಕೇಂದ್ರದ ಮೂಲಕ ಡಾ.ಬಿ.ಪಿ ಸಂಪತ್ ಕುಮಾರ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಲ್ಲಿಸಿದ ' ಕನ್ನಡ ಜೈನ ಸಾಹಿತ್ಯದಲ್ಲಿ ಕರ್ಮಸಿದ್ಧಾಂತದ ಸ್ವರೂಪ’ '  ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ನೀಡಿದೆ. 


ಇವರು ಧಾರ್ಮಿಕ ಉಪನ್ಯಾಸಕರು , ಅನೇಕ ಶಾಸ್ತ್ರದಾನ ಪುಸ್ತಕಗಳ ಸಂಪಾದಕರು ,  ಚಾವಡಿ ಚರ್ಚೆ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ.  ನೆಲ್ಯಾಡಿ ಜೇಸಿಐ ಇದರ ಪೂರ್ವಾಧ್ಯಕ್ಷರು ಹಾಗೂ ಭಾರತೀಯ ಜೈನ್ ಮಿಲನ್ ಇದರ ಇಚ್ಲಂಪಾಡಿ ಶಾಖೆಯ ಪೂರ್ವಾಧ್ಯಕ್ಷರು ಕೂಡ ಆಗಿದ್ದಾರೆ. 


ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು , ಕಾರ್ಯದರ್ಶಿಗಳಾದ  ಡಿ. ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ. ಎಸ್ ಹಾಗೂ ಪ್ರಾಂಶುಪಾಲರಾದ  ಪ್ರಮೋದ್ ಕುಮಾರ್. ಬಿ ಯವರು ಅಭಿನಂದಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top