ಈ ಬಾರಿಯ ಪರಿಸರ ದಿನಕ್ಕೆ ಒಂದು ಸಣ್ಣ ಆಣೆ ಮಾಡೋಣ

Upayuktha
0


"ಪ್ಲಾಸ್ಟಿಕ್ ನೀರಿನ ಬಾಟಲಿ ನೀರು ಕುಡಿಯುವುದಿಲ್ಲ" ಅಥವಾ "ಪೇಪರ್/ಪ್ಲಾಸ್ಟಿಕ್ ಲೋಟ, ಕಪ್‌ಗಳಲ್ಲಿ ಪಾನೀಯಗಳನ್ನು ಕುಡಿಯುವುದಿಲ್ಲ" ಅಥವಾ "ಪಾನೀಯಗಳನ್ನು ಕುಡಿಯುವಾಗ ಸ್ಟ್ರಾ ಬಳಸುವುದಿಲ್ಲ".


ಅಥವಾ ಇದೇ ರೀತಿಯ ಪ್ಲಾಸ್ಟಿಕ್ ರಿಲೇಟೆಡ್ ಇನ್ನ್ಯಾವುದಾದರೂ ಒಂದು (ಅಥವಾ ಒಂದಕ್ಕಿಂತ ಹೆಚ್ಚು) ಪ್ಲಾಸ್ಟಿಕ್ ವಿಚಾರದಲ್ಲಿ ಒಂದು ಆಣೆ ಪ್ರಮಾಣ ಮಾಡಿ, ಸಂಕಲ್ಪಮಾಡಿ, ಜಾರಿಗೆ ತರೋಣ.


ನಮ್ಮ ಆರೋಗ್ಯಕ್ಕೆ, ನಮ್ಮ ಆಪ್ತರ ಆರೋಗ್ಯಕ್ಕೆ, ನಮ್ಮ ಸುತ್ತಮುತ್ತಲಿನವರ ಆರೋಗ್ಯಕ್ಕೆ, ಪರಿಸರಕ್ಕೆ, ಪರಿಸರದ 84 ಲಕ್ಷ ಜೀವರಾಶಿಗಳ ಆರೋಗ್ಯಕ್ಕೆ ಒಂದು ಪ್ರಮಾಣ ಮಾಡೋಣ.


*******




ಭಗವಂತನು ನಮ್ಮನ್ನು ಈ ಪ್ರಪಂಚ ಸ್ಟೇಡಿಯಂಗೆ ಕಳಿಸುವ ಮೊದಲು- ಶುದ್ದ ನೀರು, ಶುದ್ಧ ಗಾಳಿ, ಶುದ್ದ ಮಣ್ಣು, ಶುದ್ಧ ಆಹಾರ, ಶುದ್ಧ ಜೀವ ವೈವಿಧ್ಯ, ಶುದ್ದ ಬೆಳಕುಗಳ ಪರಿಸರವನ್ನು ನಿರ್ಮಿಸಿ, ನಂತರ ನಮ್ಮನ್ನು ಈ 'ಸ್ಟೇಡಿಯಂ'ಗೆ ಕಳಿಸಿದ್ದಾನೆ.


ನಾವು ನಮ್ಮ ಸೀಮಿತ ಅವಧಿಯ ಆಟ ಮುಗಿಸಿ ಹೋಗುವಾಗ ಎಲ್ಲ ಶುದ್ಧತೆಯನ್ನು ಕುಲಗೆಡಿಸಿ ಹೋಗುವುದೇಕೆ?  


"ಪಾನೀಯ ಕುಡಿಯುವಾಗ ಸ್ಟ್ರಾ ಬಳಸುವುದಿಲ್ಲ" (ಅಥವಾ ಇನ್ಯಾವುದಾದರು) ಎಂಬ ಒಂದು ಸಣ್ಣ ಸಂಕಲ್ಪ ಮತ್ತು ಆಣೆ-ಪ್ರಮಾಣ, ಇಡೀ ಪರಿಸರವನ್ನು ಶುದ್ಧವಾಗಿಡುವ ಪ್ರಕ್ರಿಯೆಗೆ ನಮ್ಮ ಮೊದಲ ಹೆಜ್ಜೆ ಆಗಲಿ.


ಎಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳು


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top