ಕುಮಾರ್ ಪೆರ್ನಾಜೆ- ಸೌಮ್ಯ ದಂಪತಿಗಳಿಗೆ ಕೃಷಿ ರತ್ನ ಪ್ರಶಸ್ತಿ, ಜೂ.15ರಂದು ಪ್ರದಾನ

Chandrashekhara Kulamarva
0


ಪುತ್ತೂರು: ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ). ಪಾಂಬಾರ್ ಇದರ ವತಿಯಿಂದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸೀಸನ್ 04 ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರ ಪುತ್ತೂರಲ್ಲಿ ಜೂನ್ 15 ರಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.

  

ಕೃಷಿ, ಜೇನು ಕೃಷಿ, ಬರವಣಿಗೆ ಮತ್ತು ಕಲಾ ಸೇವೆಗಾಗಿ ಅಂತರ್ ರಾಜ್ಯ ಮಟ್ಟದ ಕೃಷಿ ರತ್ನ ಪ್ರಶಸ್ತಿಗೆ, ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ) ಪಾಂಬಾರ್ ಸಂಚಾಲಕ ರವಿ ಪಾಂಬಾರ್ ತಿಳಿಸಿದ್ದಾರೆ.


ಈಶ್ವರಮಂಗಲದಲ್ಲಿ ನಡೆದ ಗ್ರಾಮ ಗ್ರಾಮ ಸಾಹಿತ್ಯ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮದಲ್ಲಿ, ವಿಟ್ಲ ಸ್ವರ ಸಿಂಚನ ಸಂಗೀತೋತ್ಸವ 2024ರಲ್ಲಿ, ಬೆಂಗಳೂರು ವಿಶ್ವ ಹವ್ಯಕ ಸಮ್ಮೇಳನದಲ್ಲಿ, ಗಡಿನಾಡ ಸಮ್ಮೇಳನದಲ್ಲಿ ಮಧುಭೂಷಣ, ಜಿಲ್ಲಾ ರಾಜ್ಯೋತ್ಸವ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ  ಸಂಘ ಸಂಸ್ಥೆಗಳಿಂದ ಇವರು ಗೌರವಕ್ಕೆ ಪಾತ್ರರಾಗಿದ್ದಾರೆ.


إرسال تعليق

0 تعليقات
إرسال تعليق (0)
To Top