ವಿದ್ಯಾರ್ಥಿನಿಯ ಉನ್ನತ ವ್ಯಾಸಂಗಕ್ಕೆ ಕುಲಾಲ ಪ್ರತಿಷ್ಠಾನದಿಂದ 25 ಸಾವಿರ ರೂ ನೆರವು

Chandrashekhara Kulamarva
0

ಪಿಯುಸಿಯಲ್ಲಿ 14ನೇ ರ್‍ಯಾಂಕ್ ಗಳಿಸಿದ ರಶ್ಮಿತಾ ರಾಜು ಕುಲಾಲ್




ಮಂಗಳೂರು: ಕರ್ನಾಟಕದ ರಾಜ್ಯದ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 14ನೇ ರಾಂಕ್ ಮತ್ತು ಮಂಗಳೂರಿಗೆ 6ನೇ ರಾಂಕ್ ಗಳಿಸಿರುವ ಕುಮಾರಿ ರಶ್ಮಿತಾ ರಾಜು ಕುಲಾಲ್ ಇವರ ಉನ್ನತ ವ್ಯಾಸಂಗಕ್ಕೆ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಸುಮಾರು 25 ಸಾವಿರವನ್ನು ನೆರವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದಲ್ಲಿ ನೀಡಲಾಯಿತು.


ಕುಲಾಲ ಪ್ರತಿಷ್ಠಾನದ ಸಮಾಜ ಕಲ್ಯಾಣ ಆಶ್ರಯದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹಕಾರವನ್ನು ನೀಡುವ ಉದ್ದೇಶದಿಂದ ನಿರಂತರ ಕುಲಾಲ ಸಮಾಜದ ಬಂಧುಗಳಿಗೆ ಸಹಕಾರವನ್ನು ನೀಡುತ್ತಾ ಬರುತ್ತಿದೆ. ಜಿಲ್ಲಾ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರ ಉಪಸ್ಥಿತಿಯಲ್ಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಸುರೇಶ್ ಎನ್ ಕುಲಾಲ್ ಮಂಗಳಾದೇವಿ, ಟ್ರಸ್ಟಿಗಳಾದ ಪ್ರೇಮಾನಂದ ಕುಲಾಲ್, ದಿನೇಶ್ ಕುಲಾಲ್ ಇವರು ನೆರವನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಮುಂಡರಿಕ್ಷ ಕುಲಾಲ್, ನ್ಯಾಯವಾದಿ ಕುಶಲಪ್ಪ, ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರಾದ ಸದಾಶಿವ ಕುಲಾಲ್ ಅತ್ತಾವರ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಕುಲಾಲ್ ಶಕ್ತಿನಗರ, ದೇವಸ್ಥಾನದ ಟ್ರಸ್ಟ್ ಗಿರಿಧರ್ ಜೆ ಮೂಲ್ಯ, ಪ್ರತಿಷ್ಠಾನದ ಮಹಾದಾನಿ ಸುನಿಲ್ ಆರ್ ಸಾಲ್ಯಾನ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯಯವರು ರಶ್ಮಿತಾ ಕುಲಾಲ್ ಅವರಿಗೆ ಶುಭ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top