ಕರ್ಣಾಟಕ ಬ್ಯಾಂಕ್ ಸಿಇಓ, ಇ.ಡಿ ರಾಜೀನಾಮೆ ಅಂಗೀಕಾರ

Upayuktha
0


ಮಂಗಳೂರು: ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ & ಸಿಇಓ ಶ್ರೀ ಶ್ರೀಕೃಷ್ಣನ್ ಹರಿಹರ ಶರ್ಮಾ ಅವರ ರಾಜೀನಾಮೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಭಾನುವಾರ ಆಂಗೀಕರಿಸಿದೆ.


ಈ ರಾಜೀನಾಮೆ 2025ರ ಜುಲೈ 15ರಿಂದ ಅನ್ವಯವಾಗಲಿದೆ. ಶರ್ಮಾ ಅವರು ಮುಂಬೈಗೆ ಮರಳುವುದೂ ಸೇರಿದಂತೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ಹೇಳಿದೆ.


ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಶೇಖರ್ ರಾವ್ ಅವರು ಕೂಡಾ ಮಂಗಳೂರಿಗೆ ಸ್ಥಳಾಂತರಗೊಳ್ಳಲು ಅಸಾಧ್ಯ ಎಂಬ ಕಾರಣ ನೀಡಿ ಮತ್ತು ಇತರ ವೈಯಕ್ತಿಕ ಸಮಸ್ಯೆಗಳ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆಯನ್ನೂ ಬ್ಯಾಂಕ್ ಆಡಳಿತ ಮಂಡಳಿ ಆಂಗೀಕರಿಸಿದ್ದು, ಇದು ಜುಲೈ 31ರಿಂದ ಅನ್ವಯವಾಗಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top