ಡಾ| ಎಂ.ಮೋಹನ ಆಳ್ವರಿಗೆ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ

Chandrashekhara Kulamarva
0


ಮೂಡುಬಿದಿರೆ: ಶಿಕ್ಷಣ ಕಾಶಿ, ಆಧುನಿಕ ಮೂಡುಬಿದಿರೆಯ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂಲಕ ಕ್ರಾಂತಿಯನ್ನೇ ಮಾಡಿದ ಡಾ. ಎಂ. ಮೋಹನ್ ಆಳ್ವ ಅವರ ಸೇವೆಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರವು 2020-21ನೇ ಸಾಲಿನ ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಯನ್ನು ಬುಧವಾರ (ಜೂ.4) ಬೆಂಗಳೂರಿನ ರವೀಂದ್ರ ಕಲಾ ಕೇತ್ರದಲ್ಲಿ ನೀಡಿ ಗೌರವಿಸಿದೆ.


ಕಳೆದ 17 ವರ್ಷಗಳಿಂದ ನಡೆದುಕೊಂಡು ಬಂದ ‘ಆಳ್ವಾಸ್ ನುಡಿಸಿರಿ’ ಕನ್ನಡ ಸಾಹಿತ್ಯ ಸಮ್ಮೇಳನ, 30 ವರ್ಷಗಳಿಂದ ನಿರಂತರ ಆಯೋಜನೆಗೊಳ್ಳುತ್ತಿರುವ ‘ಆಳ್ವಾಸ್ ವಿರಾಸತ್’ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯೆಂದು ಸತತ ಗೌರವಕ್ಕೆ ಪಾತ್ರವಾಗುತ್ತಿರುವ ಸಂಪೂರ್ಣ ಉಚಿತ ಶಿಕ್ಷಣದ ‘ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ’, ಆಳ್ವಾಸ್ ರಂಗ ಅಧ್ಯಯನ ಕೇಂದ್ರ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಗಳ ಮೂಲಕ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿಗಳಿಗೆ ನೀಡಿದ ಡಾ| ಎಂ. ಮೋಹನ ಆಳ್ವರ ಸೇವೆಯನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಈ ಪ್ರಶಸ್ತಿ ನೀಡಿ ಗೌರವಿಸಿದೆ.


إرسال تعليق

0 تعليقات
إرسال تعليق (0)
To Top