ಆಫ್ರಿಕಾದ ಕಂಪಾಲಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಡಾ. ಪ್ರಣವಾನಂದ ಶ್ರೀ ಭಾಗಿ

Upayuktha
0


ಕಲಬುರಗಿ: ಆಫ್ರಿಕಾ ರಾಷ್ಟ್ರದ  ಪ್ರವಾಸದಲ್ಲಿರುವ ಕಲಬುರಗಿಯ ಚಿತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿಯವರು ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಉಗಾಂಡಾ ರಾಜ್ಯದಲ್ಲಿ ಭಾರತದ ರಾಯಭಾರಿ ಕಚೇರಿಯು ಆಯೋಜಿಸಿದ 11ನೇ ವರ್ಷದ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಪ್ರದರ್ಶನ ನೀಡಿದರು. ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಅಲ್ಲಿನ ಅನೇಕ ಭಾರತಿಯ ಸಂಸ್ಥೆಗಳು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು. ಹಾಗೂ ಇಂಡಿಯನ್ ಹೈ ಕಮಿಷನರ್ ಜಿತೇಂದ್ರ ನೇಗಿ, ಇಂಡಿಯನ್ ಅಸೋಸಿಯೇಷನ್ ಪ್ರೆಸಿಡೆಂಟ್ ಪರೇಶ್ ಮೆಹ್ತಾ, ಕನ್ನಡ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಂತೋಷ ರಾಠೋಡ, ಆಫ್ರಿಕನ್ ಸ್ಟಡಿ ಸೆಂಟರ್ ಜನರಲ್ ಸೆಕ್ರೆಟರಿ ಕೆನ್ನೆತ್ ಕಿಯಾಗ, ಈಸ್ಟ್ ಇಂಡಿಯಾ ಅಸೋಸಿಯೇಷನ್ ಪ್ರೆಸಿಡೆಂಟ್ ವಿಜಯ ರಘುನಾಥ ಕಿಶೋರಿ ಭಾಗವಹಿಸಿದ್ದರು.


ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು 2014ರಲ್ಲಿ ವಿಶ್ವಸಂಸ್ಥೆಯಲ್ಲಿ ವಿಷಯ ಮಂಡನೆ ಮಾಡಿ ಪ್ರಾರಂಭಗೊಂಡ ಯೋಗ ಇಂದು ಜಗದಗಲ ಪಸರಿಸಿ ಖ್ಯಾತಿ ಹೊಂದುತ್ತಿರುವುದು ಸಂತಸದ ಸಂಗತಿಯಾಗಿದೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಯೋಗಾ ಅತ್ಯಂತ ಸಹಕಾರಿ ಯಾಗಿದ್ದು ಉಗಾಂಡ ರಾಜ್ಯದ ಕಂಪಾಲಾದಲ್ಲಿ ಜನರು ಉತ್ಸಾಹದಿಂದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಸಂತಸದ ಸಂಗತಿ ಎಂದು ಸ್ವಾಮೀಜಿಯವರು ನಂತರ ಸುದ್ದಿಗಾರರಿಗೆ ತಿಳಿಸಿದರು.


ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು ಆ ಮೂಲಕ ಆರೋಗ್ಯ ಪೂರ್ಣ ಬದುಕು ಮಾಡಲು ಸಾಧ್ಯ. ಒಂದು ಭೂಮಿ ಎಲ್ಲರಿಗೂ ಆರೋಗ್ಯಕ್ಕಾಗಿ ಯೋಗ ಎಂಬ ಈ ಬಾರಿಯ ಘೋಷವಾಕ್ಯ ದೊಂದಿಗೆ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸೋಣ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top