ಹವ್ಯಕ ಮಂಡಲ ಗುಂಪೆ ವಲಯ ಸಭೆ

Chandrashekhara Kulamarva
0


ಕಾಸರಗೋಡು: ಹವ್ಯಕ ಮಹಾಮಂಡಲದ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ಭಾನುವಾರ (ಜೂ.1) ಗುಂಪೆ ವಲಯ ಕಛೇರಿ ಧರ್ಮತ್ತಡ್ಕದಲ್ಲಿ ನಡೆಯಿತು.


ಸಭೆಯಲ್ಲಿ 2024-2025 ನೇ ಶೈಕ್ಷಣಿಕ‌ ವರ್ಷದಲ್ಲಿ S.S.L.C ಹಾಗೂ PUCಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿ‌ಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿ‌ಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ SSLC A+ ಪಡೆದ ಪವನ್ ರಾಮ ನೇರೋಳು, ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಅಭಿದೀಪ್ ಎಚ್ ಕೆ ಬೆಜಪ್ಪೆ, ಪ್ರತೀಕ್ಷಾ ಬಾಯಡಿ, ಅನಘ ಕೆ ಕರುವಜೆ, PUC ವಿದ್ಯಾರ್ಥಿ ಗಳದ ಅರುಣ ಮರುವಳ, ಆದೀಶ ಕೃಷ್ಣ ಅಮ್ಮಂಕಲ್ಲು ಇವರಿಗೆ ಶಾಲು ಹೊದೆಸಿ, ಫಲ ನೀಡಿ, ದೀಪ ಹಾಗೂ ಅಭಿನಂದನಾ ಪತ್ರವಿರುವ‌ ಫಲಕ ನೀಡಿ ಸನ್ಮಾನಿಸಲಾಯಿತು.


ವಲಯ ಅಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಕೋಶಾಧಿಕಾರಿ ರಾಜಗೋಪಾಲ ಭಟ್ ಅಮ್ಮಂಕಲ್ಲು, ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ, ಗುರಿಕಾರ ಗಣಪತಿ ಭಟ್ ಹಳ್ಳಕೊಡ್ಲು, ಸುಬ್ಬ ಭಟ್ ಎಡಕ್ಕಾನ, ಗೋಪಾಲಕೃಷ್ಣ ಭಟ್ ಮಾಣಿ, ವೈದಿಕ ವಿಭಾಗ ತಿರುಮಲೇಶ್ವರ ಭಟ್ ಮರುವಳ, ಮಾತೃ ವಿಭಾಗ ಕಾವೇರಿ ಗುಂಪೆ, ಶಿಷ್ಯ ಮಾಧ್ಯಮ ದಿವ್ಯಾ ಭಾರತಿ ಅಮ್ಮಂಕಲ್ಲು, ವಿದ್ಯಾರ್ಥಿ ವಾಹಿನಿ ನಳಿನಿ ಬೆಜಪ್ಪೆ, ವಲಯದ ಶಿಷ್ಯ ಬಾಂಧವರು ಉಪಸ್ಥಿತರಿದ್ದರು.


ಹೆತ್ತವರ ಪರವಾಗಿ ಶಂಕರನಾರಾಯಣ ಭಟ್ ನೇರೋಳು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top