ಶ್ರೀನಿವಾಸ ವಿವಿಯಲ್ಲಿ “ಡಾ ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ‍್ ಫ್ಯೂಚರ್ ಸ್ಕಿಲ್ಸ್” ಉದ್ಘಾಟನೆ

Chandrashekhara Kulamarva
0




ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಘಟಕವಾಗಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ (SIT) ಜಾಗತಿಕ ಉದ್ಯಮ ಪ್ರವ್ರುತ್ತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸುಧಾರಿತ ತಾಂತ್ರಿಕ ನಿಪುಣತೆಗಳನ್ನು ನೀಡುವ ಉದ್ದೇಶದಿಂದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (NSDC) ಮತ್ತು ಎಥ್ನೋಟೆಕ್ ಅಕಾಡೆಮಿ ಸಹಭಾಗಿತ್ವದಲ್ಲಿ ಪ್ರಾರಂಭಿಸುತ್ತಿರುವ ಆವಿಷ್ಕಾರಾತ್ಮಕ ಯೋಜನೆ “ಡಾ ಸಿಎ ಎ. ರಾಘವೇಂದ್ರ ರಾವ್ ಸೆಂಟರ್ ಫಾರ‍್ ಫ್ಯೂಚರ್ ಸ್ಕಿಲ್ಸ್” ಉದ್ಘಾಟನಾ ಸಮಾರಂಭ  2025ರ ಜೂನ್ 17, ಮಂಗಳವಾರದಂದು ಮಂಗಳೂರಿನ ವಲಚ್ಚಿಲ್‌ನಲ್ಲಿ ಇರುವ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ನಡೆಯಲಿದೆ. 


ಈ ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ:

ಡಾ ಶರಣಪ್ರಕಾಶ್ ರುದ್ರಪ್ಪ ಪಾಟೀಲ, ಗೌರವಾನ್ವಿತ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು, ಕರ್ನಾಟಕ ಸರ್ಕಾರ

ಯು ಟಿ ಖಾದರ್ ಫರೀದ್, ಗೌರವಾನ್ವಿತ ವಿಧಾನಸಭಾಧ್ಯಕ್ಷರು, ಕರ್ನಾಟಕ

ನಾಗರಾಜ ಎನ್ ಎಂ, ಐಎಎಸ್, ವ್ಯವಸ್ಥಾಪನಾ ನಿರ್ದೇಶಕರು, KSDC

ಡಾ ಸಿಎ ಎ. ರಾಘವೇಂದ್ರ ರಾವ್, ಕುಲಾಧಿಪತಿಗಳು, ಶ್ರೀನಿವಾಸ ವಿಶ್ವವಿದ್ಯಾಲಯ

ಡಾ ಎ. ಶ್ರೀನಿವಾಸ್ ರಾವ್, ಸಹ ಕುಲಾಧಿಪತಿಗಳು, ಶ್ರೀನಿವಾಸ ವಿಶ್ವವಿದ್ಯಾಲಯ

ಡಾ ಕಿರಣ್ ರಾಜಣ್ಣ, ಅಧ್ಯಕ್ಷರು, ಎಥ್ನೋಟೆಕ್ ಗ್ರೂಪ್

ವಿಜಯಲಕ್ಷ್ಮೀ ಆರ್. ರಾವ್, ಟ್ರಸ್ಟಿ ಸದಸ್ಯರು, ಶ್ರೀನಿವಾಸ ಗುಂಪು

ಪ್ರೊ. ಇಆರ್.  ಮಿತ್ರಾ ಎಸ್. ರಾವ್, ಟ್ರಸ್ಟಿ ಸದಸ್ಯರು, ಶ್ರೀನಿವಾಸ ಗುಂಪು

ಡಾ ಶ್ರೀನಿವಾಸ ಮಯ್ಯ ಡಿ., ಪ್ರಾಚಾರ್ಯರು, ಎಸ್‌ಐಟಿ ಹಾಗೂ ಮೌಲ್ಯಮಾಪನ ರಿಜಿಸ್ಟ್ರಾರ್, ಶ್ರೀನಿವಾಸ ವಿಶ್ವವಿದ್ಯಾಲಯ

ಡಾ ಸಿಎ ಎ. ರಾಘವೇಂದ್ರ ರಾವ್ ಫ್ಯೂಚರ್ ಸ್ಕಿಲ್ಸ್ ಸೆಂಟರ್ ಈ ಸಮಯದ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಮಾರ್ಗದರ್ಶನದಲ್ಲಿ ಹೊಸ ಮೈಲುಗಲ್ಲಾಗಿ ಪರಿಣಮಿಸಲಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್  (IoT), ಡೇಟಾ ಸೈನ್ಸ್ ಮುಂತಾದ ತಾಂತ್ರಿಕತೆಗಳ ತರಬೇತಿಗಳನ್ನು ಒದಗಿಸಲಾಗುತ್ತದೆ.


ಈ ಪ್ರಾರಂಭಿಕತೆಯು ನಾವೀನ್ಯತೆಯಿಂದ ಕೂಡಿದ ಪಠ್ಯಕ್ರಮ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಶಕ್ತಿಯುತ ಶೈಕ್ಷಣಿಕ-ಉದ್ಯಮ ಸಹಕಾರದ ಮೂಲಕ ಉದ್ಯಮಕ್ಕೆ ತಯಾರಾದ ವೃತ್ತಿಪರರನ್ನು ರೂಪಿಸುವಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


• ಉಪಸ್ಥಿತಿ: ಡಾ. ಸತ್ಯನಾರಾಯಣ ರೆಡ್ಡಿ, ಉಪ ಕುಲಪತಿ, ಶ್ರೀನಿವಾಸ ವಿಶ್ವವಿದ್ಯಾಲಯ,ಡಾ ಕಿರಣ್ ರಾಜಣ್ಣ, ಅಧ್ಯಕ್ಷರು, ಎಥೋಟೆಕ್ ಗ್ರೂಪ್,  ಡಾ. ಅನಿಲ್ ಕುಮಾರ್, ರಿಜಿಸ್ಟ್ರಾರ್, ಶ್ರೀನಿವಾಸ ವಿಶ್ವವಿದ್ಯಾಲಯ, ಡಾ. ಶ್ರೀನಿವಾಸ ಮಯ್ಯ ಡಿ.. ಪ್ರಾಚಾರ್ಯರು, ಎಸ್‌ಐಟಿ ಹಾಗೂ ಮೌಲ್ಯಮಾಪನ ರಿಜಿಸ್ಟ್ರಾರ್, ಶ್ರೀನಿವಾಸ ವಿಶ್ವವಿದ್ಯಾಲಯ, ಡಾ. ಅಜಯ್ ಕುಮಾರ್, ಅಭಿವೃದ್ಧಿ ರಿಜಿಸ್ಟ್ರಾರ್, ಶ್ರೀನಿವಾಸ ವಿಶ್ವವಿದ್ಯಾಲಯ.



إرسال تعليق

0 تعليقات
إرسال تعليق (0)
To Top