ಹಂಪಿ ಆರ್ಟ್ ಲ್ಯಾಬ್‍ನಲ್ಲಿ ಧ್ರುವಿ ಆಚಾರ್ಯ ಅವರ ಕಲಾ ಪ್ರದರ್ಶನ

Upayuktha
0


ಬಳ್ಳಾರಿ: ಜೆಎಸ್‍ಡಬ್ಲ್ಯೂ ಫೌಂಡೇಶನ್ ತೊಡಗಿಸಿ ಕೊಂಡಿರುವ ವಿಶಿಷ್ಟ ಕಲಾ ಕ್ಷೇತ್ರದ ಹಂಪಿ ಆರ್ಟ್ ಲ್ಯಾಬ್ಬಲಿ. ಪ್ರಖ್ಯಾತ ಸಮಕಾಲೀನ ಕಲಾವಿದೆ ಶ್ರೀಮತಿ ಧ್ರುವಿ ಆಚಾರ್ಯ ಅವರ 'ದಿ ಜರ್ನಿ ಇಸ್ ಹೋಮ್' ಎಂಬ ಶೀರ್ಷಿಕೆಯ ವೈಯಕ್ತಿಕ ಮಹತ್ವದ ಕಲಾಪ್ರದರ್ಶನವನ್ನು ಆಯೋಜಿಸಲಾಗಿದೆ. ಹಿರಿಯ ಕಲಾ ವಿಮರ್ಶಕ ಗಿರೀಶ್ ಶಾಹಾನ ಅವರ ಸಂಯೋಜನೆಯಲ್ಲಿ ಈ ಪ್ರದರ್ಶನ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ಲಭ್ಯವಿರುತ್ತದೆ. 


ಈ ವಿಶಿಷ್ಟ ಪ್ರದರ್ಶನದಲ್ಲಿ ಶ್ರೀಮತಿ ಧ್ರುವಿ ಆಚಾರ್ಯ ಅವರ ಆರಂಭಿಕ ರಚನೆಗಳಿಂದ ಇತ್ತೀಚಿನ ಗಾಢ ವ್ಯಕ್ತಿತ್ವದ ಕಲಾಕೃತಿಗಳವರೆಗೆ ವಿವಿಧ ಹಂತಗಳ ಶ್ರೇಣಿಯನ್ನು ಪರಿಚಯಿಸಲಾಗುತ್ತದೆ. 'ದಿ ಜರ್ನಿ ಇಸ್ ಹೋಮ್' ಒಂದು ಆಳವಾದ ವೈಯಕ್ತಿಕ ಅನುಭವಗಳನ್ನು ಒಳಗೊಂಡಿದೆ. ಅಂದರೆ ಆತ್ಮಪರಿಚಯ. ಮಾತೃತ್ವದ ವೈಚಾರಿಕತೆ. ಪರಿಸರದ ಪ್ರತಿಬದ್ಧತೆ, ದುಃಖದ ಅವಧಿಗಳು ಹಾಗೂ ನಗರ ಬದುಕಿನ ಸವಾಲುಗಳು, ಅವರ ಕಲೆ. ಆತ್ಮಕಥನದ ರೂಪದಲ್ಲಿ ಮೂಡಿಬಂದರೂ, ಅದು ಸಾರ್ವತ್ರಿಕ ಭಾವನೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ.


ಈ ಪ್ರದರ್ಶನದ ಶೀರ್ಷಿಕೆ ಜಪಾನಿನ ಝನ್ ಕವಿ ಮತ್ತು ಮಾಟ್ಟುವೊ ಬಾಶೋ ಕವನದಿಂದ ಪ್ರೇರಿತವಾಗಿದೆ. ಬೌದ್ಧ ತತ್ತ್ವಗಳ ಪ್ರತಿಯೊಬ್ಬ ಕಲಾವಿದರಲ್ಲಿ ಪ್ರಾರಂಭವಾದ ಆಕರ್ಷಣೆಯ ಅಭಿವ್ಯಕ್ತಿ ಈ ಶೀರ್ಷಿಕೆಯಲ್ಲಿ ಪ್ರತಿಫಲಿಸುತ್ತದೆ. ಶ್ರೀಮತಿ ಧ್ರುವಿಯ ಚಿತ್ರಗಳು ಸಾಮಾನ್ಯವಾಗಿ ಮಹಿಳೆಯ ಮಾನಸೀಕ ಹಾಗೂ ಭಾವನಾತ್ಮಕ ಆಲೋಚನೆಗಳನ್ನು ನವಿರಾಗಿ ಅನಾವರಣಗೊಳಿಸುತ್ತವೆ. ಪ್ರದರ್ಶನವು ಜೆಎಸ್‍ಡಬ್ಲ್ಯೂ ಸಂಗ್ರಹದ ಪ್ರಮುಖ ಕಲಾಕೃತಿಗಳನ್ನೂ ಕೂಡಾ ಒಳಗೊಂಡಿದೆ. 


ಜೆಎಸ್‍ಡಬ್ಲ್ಯೂ ಫೌಂಡೇಶನ್ ಅಧ್ಯಕ್ಷೆ ಸಂಗೀತಾ ಜಿಂದಾಲ್ ಅವರು ಈ ಸಂದರ್ಭದಲ್ಲಿ, “ ಧ್ರುವಿ ಆಚಾರ್ಯ ಅವರ ಚಿತ್ರಗಳಲ್ಲಿ, ನಾನು ನಿರಂತರವಾಗಿ ಆಶೆ ಹಾಗೂ ಮನೋಬಲದ ಬೆಳಕು ನೋಡುತ್ತೇನೆ. ಮಹಿಳೆಯ ಆತ್ಮವೀಕ್ಷಣೆ ಹಾಗೂ ಭಾವನೆಗಳ ಸೂಕ್ಷ್ಮತೆ ಅವರು ಚಿತ್ರಿಸಿರುವ ರೀತಿಯಲ್ಲಿ ಅತ್ಯಂತ ಮನಮಿಡಿಯುವಂತೆ ಪ್ರತಿಬಿಂಬಿಸುತ್ತದೆ. ನಾನು ಬಹುಮಾನಿಸುವ ಶ್ರೀಮತಿ ಧ್ರುವಿ ಅವರ ಈ ವೈಯಕ್ತಿಕ ಕಲಾಪ್ರದರ್ಶನವು ಹಂಪಿ ಆರ್ಟ್ ಲ್ಯಾಬ್‍ನಲ್ಲಿ ನಡೆಯುತ್ತಿರುವುದು ನನಗೆ ಅಪಾರ ಸಂತೋಷ ನೀಡುತ್ತಿದೆ" ಎಂದು ತಿಳಿಸಿದರು.


ಧ್ರುವಿ ಆಚಾರ್ಯ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತ, "ಈ ಪ್ರದರ್ಶನ ನನ್ನ ಕಲಾಜೀವನದ ನಾನಾ ಹಂತಗಳ ಸಂಕ್ಷಿಪ್ತ ನೋಟವಾಗಿದೆ. ಜೆಎಸ್‍ಡಬ್ಲ್ಯೂ ಸಂಗ್ರಹದಲ್ಲಿರುವ ನನ್ನ ಹಲವಾರು ಚಿತ್ರಗಳು. ಕಳೆದ 25 ವರ್ಷಗಳಲ್ಲಿ  ಸಂಗೀತಾ ಜಿಂದಾಲ್ ಅವರು ಆಯ್ಕೆಮಾಡಿದ ಅಥವಾ ಸ್ವಾಧೀನಪಡಿಸಿಕೊಂಡ ಕಲಾಕೃತಿಗಳಾಗಿವೆ. ಇಲ್ಲಿ ತೋರಿಸಲಾಗುತ್ತಿರುವ ಪ್ರತಿಯೊಂದು ಚಿತ್ರವೂ ನನ್ನ ಸ್ಮೃತಿಗಳಲ್ಲಿಯ, ಪ್ರೀತಿ. ಕಷ್ಟ-ನಷ್ಟ, ಮಾತೃತ್ಯ, ಮಹಿಳೆಯ ಸ್ಥಾನಮಾನ ಹಾಗೂ ಪರಿಸರದ ತೀವ್ರವಾದ ಚಿಂತನೆಗಳನ್ನು ಬಿಂಬಿಸುತ್ತವೆ. ಈ ಕಥೆಗಳಿಗೆ ಉಸಿರಾಡಲು ಅವಕಾಶ ನೀಡಿದ ಹಂಪಿ ಆರ್ಟ್ ಲ್ಯಾಟ್ಸ್ ಹಾಗೂ ಜೆಎಸ್‍ಡಬ್ಲ್ಯೂ ಫೌಂಡೇಶನ್‍ಗೆ ನಾನು ಹೃತ್ತೂರ್ವಕವಾಗಿ ಕೃತಜ್ಞಳಾಗಿದ್ದೇನೆ" ಎಂದು ಅಭಿಪ್ರಾಯಿಸಿದರು.


'ದಿ ಜರ್ನಿ ಇಸ್ ಹೋಮ್' ಪ್ರೇಕ್ಷಕರನ್ನು ಜೀವನ. ನಷ್ಟ ಮತ್ತು ಅರ್ಥದ ಹುಡುಕಾಟದ ಆಂತರಿಕ ಯಾತ್ರೆಗೆ ಕರೆದೊಯ್ಯುತ್ತದೆ. ಶ್ರೀಮತಿ ಧ್ರುವಿ ಆಚಾರ್ಯ ಅವರ ವಿಶಿಷ್ಟ ದೃಷ್ಟಿಕೋನದ ಮೂಲಕ. ಈ ಪ್ರದರ್ಶನ ಅಮೆರಿಕಾದಲ್ಲಿ ಕಳೆದ ದಿನಗಳು, ಅದ್ವಿತೀಯ ಆತ್ಮಶೋಧನೆಗಳು, ಮಾತೃತ್ವದ ಮೃದುವಾದ ಧ್ವನಿಗಳು, ಕಲಾವಿದೆಯಾಗಿ ಅನುಭವಿಸಿದ ಹೊರೆ. ಹಾಗೂ ಪರಿಸರದ ಬಗ್ಗೆ ಬೆಳೆಯುತ್ತಿರುವ ಚಿಂತನೆಗಳು ಸ್ಪಷ್ಟವಾಗಿ ವ್ಯಕ್ತವಾಗಿವೆ. ವಿಶೇಷವಾಗಿ 'ಏಆರ್ ಫೇರ್" ('AdRARE) ಎಂಬ ಚಿತ್ರದಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ತೀವ್ರವಾದ ಗಮನ ನೀಡಲಾಗಿದೆ. 1993-2013' ಕಲಾ ಸುರುಳಿಯು ಅವರ ಅತ್ಯಂತ ವಯಕ್ತಿಕ ಕಲಾಕೃತಿಗಳಲ್ಲಿ ವಿಶೇಷವಾದದ್ದು. ಇದು ಅವರ ಪತಿಗೆ ಸಲ್ಲಿಸಿದ ಸ್ಮರಣಾಂಜಲಿಯಾಗಿದೆ. ಅಲ್ಲದೆ ಚಿತ್ರರೇಖನೆಗಳು ಮೂಲಭೂತ ಪಾತ್ರವನ್ನೂ ಗುರುತಿಸಿ, ಈ ಪ್ರದರ್ಶನದಲ್ಲಿ ವೈವಿಧ್ಯಮಯ ರೇಖಾಚಿತ್ರಗಳನ್ನೂ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. 


ಪ್ರದರ್ಶನ ವಿವರಗಳು: ಶೀರ್ಷಿಕೆ: ದಿ ಜರ್ನಿ ಇಸ್ ಹೋಮ್, ಕಲಾವಿದೆ: ಧ್ರುವಿ ಆಚಾರ್ಯ, ದಿನಾಂಕ: ಜೂನ್ 1 ರಿಂದ - ಸೆಪ್ಟೆಂಬರ್ 30ರ ವರೆಗೆ, ಸಮಯ: ಬೆಳಿಗ್ಗೆ 10:00 - ಸಂಜೆ 7:00 (ಸೋಮವಾರದಿಂದ ಶುಕ್ರವಾರದವರೆಗೆ), ಹಂಪಿ ಆರ್ಟ್ ಲ್ಯಾಬ್ ಬಗ್ಗೆ ಹಂಪಿ ಆರ್ಟ್ ಲ್ಯಾಬ್ ಎಂಬುದು ಜೆಎಸ್‍ಡಬ್ಲ್ಯೂ ಫೌಂಡೇಶನ್ನ ಮಹತ್ವಾಕಾಂಕ್ಷೆಯ ಕಲೆ ಹಾಗೂ ಸಾಂಸ್ಕøತಿಕ ಯೋಜನೆ. ಇದು ಭಾರತದ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾದ ಜೆಎಸ್ ಡಬ್ಲ್ಯೂ ಗ್ರೂಪ್ (ಮೌಲ್ಯ: ಗಏ524 ಬಿಲಿಯನ್) ನ ಸಾಮಾಜಿಕ ಭದ್ರತಾ ಅಂಗವಾಗಿದೆ. 9 ಎಕರೆ ಹಸಿರೆಲೆ ಹರಡಿದ ಹಂಪಿಯ ದಿವ್ಯ ಭೂಭಾಗದಲ್ಲಿ ನೆಲೆಗೊಂಡಿರುವ ಈ ಕೇಂದ್ರದಲ್ಲಿ ಕಲಾಕಾರರಿಗಾಗಿ ಕಲಾಪ್ರದರ್ಶನ ಸ್ಥಳಗಳು. ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ಗಳು, ಪ್ರೇರಣಾದಾಯಕ ಸ್ಟುಡಿಯೋಗಳು, ತೋಟಗಳು ಮತ್ತು ಮನಮೋಹಕ ಲಘು ಉಪಹಾರ ಗೃಹವನ್ನೂ ಹೊಂದಿದೆ. ಇದು ಕಲೆಯ ಉತ್ಪಾದನೆಯ ಮೌಲ್ಯವತ್ತಾದ ಸ್ಥಳ ಮಾತ್ರವಲ್ಲ. ಅದು ಕಲಾವಿದನಿಗೆ ತಾನೇ ಶರಣಾಗುವಂತೆ ಮಾಡುವ ಸೃಜನಾತ್ಮಕ ತಪೋವನವೂ ಹೌದು. 


'ಹಂಪಿ' ಎಂದರೆ ಹಿಂದು ಸಾಮ್ರಾಜ್ಯದ ಅಂತಿಮ ರಾಜಧಾನಿಯಾಗಿದ್ದ ವಿಜಯನಗರವೆಂಬ ನಗರ. ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಇವತ್ತಿಗೂ ಶಿಲ್ಪ, ಸಾಹಿತ್ಯ ಧರ್ಮ ಹಾಗೂ ತತ್ತ್ವ ವಿಚಾರಗಳ ಧ್ವನಿ ಹರಡುವ ಪವಿತ್ರ ನೆಲೆ. ಈ ಪವಾಡಭೂಮಿಯ ಪ್ರೇರಣೆಯಿಂದಲೇ ಹಂಪಿ ಆರ್ಟ್ ಲ್ಯಾಟ್ಸ್ ಬೆಳೆದಿದೆ. ಇಲ್ಲಿ ಕಲೆ. ಇತಿಹಾಸ ಮತ್ತು ಪ್ರಕೃತಿ ಸಹಜವಾಗಿ ಒಂದಾಗಿ ಮೇಳೈಸುತ್ತವೆ.


ತುಂಗಭದ್ರಾ ನದಿಯ ಶಾಂತ ನಿನಾದ. ಶಿಲಾಸಮುದಾಯದ ಮೆರುಗು. ಹಿಮ್ಮೆಟ್ಟಿದ ಪರ್ವತಗಳ ನಡುವೆ ಈ ಕಲಾ ಕೇಂದ್ರವು ಕಾಲಾತೀತ ಅನುಭವವನ್ನು ನೀಡುತ್ತದೆ. ಇದು ಕೇವಲ ಕಲಾ ಪ್ರದರ್ಶನವಲ್ಲ, ಇಲ್ಲಿ ಪ್ರಕೃತಿಯೊಡನೆ ಮತ್ತು ಪರಂಪರೆಯೊಡನೆ, ನಾವೆಲ್ಲರೂ ಒಳಗೊಳ್ಳುವ ಪಾರಂಪರಿಕ ಸಂವಾದದೊಂದಿಗೆ ಕಲೆಯು ನಡೆಯುತ್ತದೆ.ಹಂಪಿ ಆರ್ಟ್ ಲ್ಯಾಬ್‍ನ ಕಾರ್ಯಕ್ರಮಗಳು ಸ್ಥಳೀಯ ಸಮುದಾಯದೊಂದಿಗೆ ಸುದೀರ್ಘ ಸಂವಾದ ನಡೆಸುತ್ತವೆ ಮತ್ತು ಅಂತಾರಾಷ್ಟ್ರೀಯ ಕಲಾ ಪ್ರೇಮಿಗಳ ಅನಾವರಣವಾಗುತ್ತದೆ. ಶಾಲಾ ಮಕ್ಕಳಿಗೆ ವಿನ್ಯಾಸಗೊಳಿಸಲಾದ ಕಲಾ ಕಾರ್ಯಾಗಾರಗಳು, ಕಲಾವಿದರಿಗೆ ಹಿತಕರವಾದ ವಾಸ ವಾತಾವರಣ, ಮತ್ತು ಭವಿಷ್ಯಮುಖಿ ಕಲಾತ್ಮಕ ಸಹಯೋಗಗಳು ಈ ಎಲ್ಲವುಗಳು ಕೇಂದ್ರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. 


ಈ ಕೇಂದ್ರವು ಸ್ಥಳೀಯ ನಿವಾಸಿಗಳ ಕಾರ್ಯಕ್ರಮಗಳು, ವಿಭಿನ್ನ ಕಲಾ ರೂಪಗಳ ಪ್ರದರ್ಶನಗಳು, ಜಾಗತಿಕ ದಕ್ಷಿಣಾದ್ಯಂತ ಮತ್ತು ಸಮಾನಮನಸ್ಕ ಸಂಸ್ಥೆಗಳೊಂದಿಗೆ ಉತ್ಕೃಷ್ಟ ಸಹಯೋಗಗಳ ಮೂಲಕ, ಸಂಸ್ಕೃತಿಯ ನವ ಜಾಲವನ್ನು ಕಟ್ಟಲು ಮುಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ: ಮೀರಾ ಕುರಂ : +91 98808 21356, ಜಿತೇಂದ್ರ ವಶಿಷ್ಠ : +91 94806 94494 ಸಂಪರ್ಕಿಸಬಹುದು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top