ಧರ್ಮತ್ತಡ್ಕ: ಎಸ್‌ಡಿಪಿ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ

Upayuktha
0




ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ, ಧರ್ಮತ್ತಡ್ಕದಲ್ಲಿ 2025–26ನೇ ಸಾಲಿನ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಆಚರಿಸಲಾಯಿತು. ಮಾದಕ ವಸ್ತು ಬಳಕೆಯು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತದೆ. ಇದಕ್ಕೆ ಬಲಿಯಾದರೆ ಸುಂದರ ಜೀವನ ನಶಿಸುತ್ತದೆ ಎಂದು ಮುಖ್ಯೋಪಾಧ್ಯಾಯರಾದ ಶಶಿಕುಮಾರ್ ಪಿ ತಿಳಿಸಿದರು. ಶ್ರೀಮತಿ ಸೌಮ್ಯ ಎಂ ಮಾದಕ ವಸ್ತು ವಿರೋಧಿ ಪ್ರತಿಜ್ಞೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.


ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಜರಗಿದ ಮಾದಕ ವಸ್ತು ವಿರೋಧಿ ತಿಳುವಳಿಕೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವಿಕ್ಟರ್ಸ್ ವಾಹಿನಿಯಲ್ಲಿ ನೇರ ಪ್ರಸಾರದ ಮೂಲಕ ಪ್ರದರ್ಶಿಸಲಾಯಿತು.


ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಾನಸಿಕ, ದೈಹಿಕ ಸ್ಥಿಮಿತ ಹೆಚ್ಚಿಸಲು ಅನುಕೂಲವಾಗುವಂತೆ ಶಾಲಾ ಮಟ್ಟದಲ್ಲಿ Zumba Dance ನ್ನು ದೈಹಿಕ ಅಧ್ಯಾಪಕ ಸಂತೋಷ್ ಕುಮಾರ್ ಎಂ ಅವರ ನೇತೃತ್ವದಲ್ಲಿ ಹೇಳಿಕೊಡಲಾಯಿತು.


Art Club, Little Kite Club ಹಾಗೂ ವಿಮುಕ್ತಿ Club ನೇತೃತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತು ವಿರೋಧಿ ದಿನದ ಪೋಸ್ಟರ್ ತಯಾರಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top