ವಿವೇಕಾನಂದ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ದೇವಿಚರಣ್ ರೈ ಎಂ ನೇಮಕ

Upayuktha
0


ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ದೇವಿಚರಣ್ ರೈ ಎಂ. ಇವರನ್ನು ನೇಮಕಗೊಳಿಸಲಾಗಿದೆ. ಇವರು ಸುಮಾರು 21 ವರ್ಷಗಳ ಬೋಧನಾ ಅನುಭವ ಹೊಂದಿದ್ದು, ಮಂಗಳೂರಿನ ರಾಮಕೃಷ್ಣ ಪದವಿ ಕಾಲೇಜು, ಮಹೇಶ್ ಪದವಿಪೂರ್ವ ಕಾಲೇಜು ಹಾಗೂ ಪನಾ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. 2019 ರಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, 2023ರಿಂದ ಕಾಲೇಜಿನ ಉಪಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಸೇವೆ ಸಲ್ಲಿಸುತ್ತಿದ್ದರು.


ಮೂಲತಃ ಪುತ್ತೂರಿನ ತಿಂಗಳಾಡಿಯ ನಿವಾಸಿಯಾಗಿರುವ ಇವರು ದಿವಂಗತ ವಾಸುದೇವ ರೈ ಹಾಗೂ ಗಂಗಾರತ್ನ ವಿ ರೈ ಇವರ ಪುತ್ರ. ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಇವರು ಪುತ್ತೂರಿನ ರೋಟರಿ ಯುವದ ಕಾರ್ಯದರ್ಶಿಗಳಾಗಿ, ತಿಂಗಳಾಡಿಯ ರೋಟರ್‍ಯಾಕ್ಟ್ ಅಧ್ಯಕ್ಷರಾಗಿ ಹಾಗೂ ರೋಟರ್‍ಯಾಕ್ಟ್ ಜಿಲ್ಲೆ 3181 ಇದರ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಜೂನ್ ತಿಂಗಳಿನಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಇವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘವು ನೇಮಿಸಿದೆ.


ಅಪರಾಹ್ನ  ನೂತನ ಪ್ರಾಂಶುಪಾಲರ ಪದಗ್ರಹಣ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‌ ಕಲ್ಲಡ್ಕ, ಕಾರ್ಯದರ್ಶಿಗಳಾದ ಡಾ. ಕೆ.ಎಂ. ಕೃಷ್ಣ ಭಟ್‌, ಉಪಾಧ್ಯಕ್ಷ ಸತೀಶ್‌ರಾವ್‌, ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್‌ ಮಂಕುಡೆ, ನೂತನ ಪ್ರಾಂಶುಪಾಲರ ಮಾತೃಶ್ರೀಯವರಾದ ಗಂಗಾರತ್ನ ವಿ. ರೈ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್‌, ಕೋಶಾಧಿಕಾರಿ ಸಚಿನ್‌ ಶೆಣೈ, ನಿರ್ದೇಶಕ ವತ್ಸಲಾ ರಾಜ್ಞಿ, ಡಾ. ಕೆ. ಎನ್‌ ಸುಬ್ರಹ್ಮಣ್ಯ, ಡಾ. ಮುರಳೀಕೃಷ್ಣ ರೈ, ಡಾ. ಕೃಷ್ಣಪ್ರಸನ್ನ ಕೆ, ವಸತಿ ನಿಲಯಗಳ ಅಧ್ಯಕ್ಷ ರಮೇಶ್‌ ಪ್ರಭು, ವಿವಿಧ ಸಂಸ್ಥೆಗಳ ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರು ಹಾಗೂ ಉಪನ್ಯಾಸಕ-ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದು ಶುಭ ಹಾರೈಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top