ದೈವಜ್ಞ ಸಮಾಜ ಭಾರತದ ಪ್ರತಿಷ್ಠಿತ ಸಮಾಜ: ರವಿ ಎಸ್. ಗಾವಂಕರ್

Chandrashekhara Kulamarva
0


ದಾವಣಗೆರೆ: ಸಾಧನೆ ಎನ್ನುವುದು ಕೇವಲ ಶಿಕ್ಷಣಕ್ಕೆ ಸೀಮಿತವಲ್ಲ. ನಮ್ಮ ಸಂಸ್ಕಾರ, ಸಂಸ್ಕøತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಧಾರವಾಡದ ಅಖಿಲ ಕರ್ನಾಟಕ ದೈವಜ್ಞ ಸಮಾಜದ ರಾಜ್ಯಾಧ್ಯಕ್ಷ ರವಿ.ಎಸ್. ಗಾವಂಕರ್ ಹೇಳಿದರು. 


ಇಲ್ಲಿನ ವಿನೋಬನಗರದ 1ನೇ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಭಾನುವಾರ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್ ಪ್ರತಿಷ್ಠಾನದಿಂದ  2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ದೈವಜ್ಞ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಆಯೋಜಿಸಿದ ಶಾರದಾ ಪುರಸ್ಕಾರ -2025 ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ದೈವಜ್ಞ ಸಮಾಜ ಒಂದು ಭಾರತದ ಪ್ರತಿಷ್ಠಿತ ಸಮಾಜವಾಗಿದೆ. ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಮಕ್ಕಳು ಅಳವಡಿಸಿಕೊಂಡರೆ ನಮ್ಮ ಸಮಾಜದ ಘನತೆ ಗೌರವ ಹೆಚ್ಚುತ್ತದೆ. ಈ ಪ್ರತಿಭಾವಂತ ಮಕ್ಕಳು ಮುಂದಿನ ದಿನಮಾನದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಉನ್ನತ ಮಟ್ಟಕ್ಕೆ ಹೋಗಿ ನಿಮ್ಮ ತಂದೆ ತಾಯಿ ಪೋಷಕರ ಕನಸನ್ನು ನನಸಾಗಿಸಿರಿ ಎಂದು ಕರೆ ನೀಡಿದರು. 


ಉತ್ತರ ಕನ್ನಡ ಜಿಲ್ಲೆಯ ಮಾಜಿ ಶಾಸಕ ಗಂಗಾಧರ ನಾಗೇಶ ಶೇಟ್ ಮಾತನಾಡಿ, ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಪರಂಪರೆಯನ್ನು ಜೀವನದಲ್ಲಿ ಪೋಷಕರು ಕಲಿಸಬೇಕಾಗಿದೆ. ಮಾರ್ಗದರ್ಶನಕ್ಕೆ ಕೇವಲ ಶಿಕ್ಷಣ, ಶಿಕ್ಷಕರು ಮಾತ್ರ ಸೀಮಿತವಲ್ಲ. ಪೋಷಕರ ಜವಾಬ್ದಾರಿ ಕೂಡಾ ಇರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಪೋಷಕರು ಮುಂದಾಗಬೇಕು ಎಂದರು.


ಪ್ರತಿಷ್ಠಾನದ ಸಂಸ್ಥಾಪಕ ಡಾ.ನಲ್ಲೂರು ಅರುಣಾಚಲ ಎನ್.ರೇವಣಕರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೋವಾ ಮಾಪುಸಾದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಧ ಶ್ರೀರಾಮ್ ಸುಬ್ರಾಯ್ ಪ್ರಭು ದೇಸಾಯಿ, ಪ್ರತಿಷ್ಠಾನದ ಅಧ್ಯಕ್ಷೆ ಪ್ರೇಮಾ ಅರುಣಾಚಲ ಎನ್.ರೇವಣಕರ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಶಾಂತ್ ವಿಶ್ವನಾಥ್ ವರ್ಣೆಕರ್ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು. 


ಸಾಯಿಶ್ರೀ ಸುಧೀಂದ್ರ ವರ್ಣೆಕರ್ ಪ್ರಾರ್ಥಿಸಿದರೆ, ಕವಿತಾ ಗುರುಪ್ರಸಾದ್ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ಸಲಹೆಗಾರ ಸಾಲಿಗ್ರಾಮ ಗಣೇಶ ಶೆಣೈ ಕಾರ್ಯಕ್ರಮ ನಿರೂಪಿಸಿದರೆ, ನಲ್ಲೂರು ಲಕ್ಷ್ಮಣ್‍ರಾವ್ ವಂದಿಸಿದರು.


ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಆಗಮಿಸಿದ ಸುಮಾರು 150 ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top