ಚಾಮರಾಜನಗರ: ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ

Chandrashekhara Kulamarva
0


ಚಾಮರಾಜನಗರ: ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಪತ್ರಕರ್ತ ವೀರೇಶ್ ಎಚ್ ಶಿಂಪಿ ಇವರ ಹಿರಿಯ ಸುಪುತ್ರ ಈ ಸಲದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 92/5 ಅಂಕಗಳೊಂದಿಗೆ ಪಾಸಾಗಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲಾ ಹಾಗೂ ಹನೂರ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಐತಿಹಾಸಿಕ ಸ್ಥಳ ಚಾಮರಾಜನಗರ ಜಿಲ್ಲೆ ಹನೂರ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸನ್ಮಾನಿಸಲಾಯಿತು.


ರಾಜ್ಯ ಪಶು ಸಂಗೋಪನ ಮತ್ತು ರೇಷ್ಮೆ ಸಚಿವರಾದ ಕೆ ವೆಂಕಟೇಶ್ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ ಪಿ ಸಾಹೇಬರು, ಜಿಲ್ಲೆ ಶಾಸಕರುಗಳು ಕಾ ನಿ ಪ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಹಾಗೂ ಎಲ್ಲ ಪದಾಧಿಕಾರಿಗಳ ಮತ್ತು ಸ್ಥಳೀಯ ಮುಖಂಡರುಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಪ್ರಶಸ್ತಿ ಹಾಗೂ ಗೌರವಕ್ಕೆ ಪಾತ್ರನಾಗಿ ಕಂದಗಲ್ಲ ಗ್ರಾಮದ ಕೀರ್ತಿ ಹೆಚ್ಚಿಸಿದ ಬಸವರಾಜ್ ವಿ ಶಿಂಪಿಯವರನ್ನು ಗ್ರಾಮದ ಪ್ರಗತಿಪರ ರೈತರು ಧಣಿಗಳಾದ ಚನ್ನಪ್ಪಗೌಡ್ರ್ ನಾಡಗೌಡ್ರ ಹಿರಿಯರಾದ ಮಹಾಂತೇಶ ಕಡಿವಾಲ, ಮಹಮ್ಮದಸಾಬ ಭಾವಿಕಟ್ಟಿ ಅಮರೇಶ್ ಕೊಡಕೇರಿ ಲಿಂಗರಾಜು ಶಿರಗುಂಪಿ, ಸಂಗಣ್ಣ ಹವಾಲ್ದಾರ, ಪತ್ರಕರ್ತರು ಬಾಗಲಕೋಟ ಜಿಲ್ಲಾ ಕಾ ನಿ ಪ ಅಧ್ಯಕ್ಷ ಆನಂದ ಧಲಬಂಜನ ರಾಜ್ಯ ಸಮಿತಿಯ ಮಹೇಶ್ ಅಂಗಡಿ, ಬಿ ಬಾಬು, ನಾಗೇಶ್ ನಿಲೋಗಲ್ಲ ಇಲಕಲ್ಲ ಕಾ ನಿ ಪ ಅಧ್ಯಕ್ಷ ವಿನೋದ್ ಬಾರಿಗಿಡದ, ಜಾಕಿರ ಹುಸೇನ್ ತಾಳಿಕೋಟಿ, ಪ್ರಕಾಶ ಗುಳೇದಗುಡ್ಡ, ಗುರು ಗಾಣಿಗೇರ ಭೀಮಣ್ಣ ಗಾಣಿಗೇರ, ಸೇರಿದಂತೆ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top