ಕೆನರಾ ಬ್ಯಾಂಕ್ ವತಿಯಿಂದ ಪತ್ರಿಕಾ ವಿತರಕರಿಗೆ ರೈನ್ ಕೋಟ್ ವಿತರಣೆ

Upayuktha
0


ಮಂಗಳೂರು: ಕೆನರಾ ಬ್ಯಾಂಕ್‌ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ನಗರದ ಪತ್ರಿಕಾ ವಿತರಕರಿಗೆ ರೈನ್ ಕೋಟ್ ನೀಡುವ ವಿಶೇಷ ಕಾರ್ಯಕ್ರಮ ಕೆನರಾ ಬ್ಯಾಂಕ್‌ನ ವೃತ್ತ ಕಚೇರಿಯಲ್ಲಿ ನಡೆಯಿತು.


ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್ ಶೀತ್ ಮಾತನಾಡಿ, ಬ್ಯಾಂಕ್ ನ ಮಹಾಪ್ರಬಂಧಕ ಮಂಜುನಾಥ್ ಸಿಂಘಯ್ ಅವರ  ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಪತ್ರಿಕಾ ವಿತರಕರು ಮಳೆ, ಚಳಿ ಬಿಸಿಲು ಲೆಕ್ಕಿಸದೆ ಮುಂಜಾನೆ ಎದ್ದು ಕೆಲಸ ಮಾಡುತ್ತಿದ್ದಾರೆ. ಅಂತಹ ಶ್ರಮ ಜೀವಿಗಳಿಗೆ ಬ್ಯಾಂಕ್ ಸದಾ ಸಹಾಯ ಮಾಡಲಿದೆ ಎಂದು ಹೇಳಿದರು. ಕೆನರಾ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಪತ್ರಿಕಾ ವಿತರಕ ನಾಗರಾಜ್ ಅವರು ದಾನಿಗಳ ಮೂಲಕ ರೈನ್ ಕೋಟ್ ಕೊಡಿಸುವಂತೆ ನನ್ನಲ್ಲಿ ಮನವಿ ಮಾಡಿದ್ದರು. ಕೆನರಾ ಬ್ಯಾಂಕ್ ತಕ್ಷಣವೇ ಮನವಿಗೆ ಸ್ಪಂದಿಸಿದೆ. ಪತ್ರಿಕಾ ವಿತರಕರ ಮೇಲಿನ ಅವರ ಕಾಳಜಿ ಮೆಚ್ಚಲೇ ಬೇಕಾಗಿದೆ ಎಂದು ಹೇಳಿದರು.


ಬ್ಯಾಂಕ್ ಎಜಿಎಂಗಳಾದ ತರುಣ್ ಕುಮಾರ್, ಎಸ್.ಕೆ.ಸಬಲ್, ಸಂಜಯ್ ಕುಮಾರ್ ಸಿಂಗ್, ಮಹೇಶ್ ಪ್ರಕಾಶ್, ಮಾರ್ಕೆಟಿಂಗ್ ಮ್ಯಾನೇಜರ್ ವಿನೋದ್ ತಹಲ್ಯಾನಿ, ರೇಣುಕಾ ರಾಜ್ ನ್ಯೂಸ್ ಏಜನ್ಸಿ ಮಾಲೀಕರಾದ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top