ಜೂ 22 : ಭರಮಸಾಗರದಲ್ಲಿ ಶಾರದಾ ಪುರಸ್ಕಾರ

Upayuktha
0

 


ಭರಮಸಾಗರ : ಸ್ಥಳೀಯ ಪವಮಾನ ಪ್ರತಿಷ್ಠಾನ (ರಿ) ವತಿಯಿಂದ ವಾಣಿ ನಿವಾಸ ಅಂಗಳದಲ್ಲಿ ಡಿ- 22/6/25 ಭಾನುವಾರದಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಾರದಾ ಪುರಸ್ಕಾರ ನೀಡಿ ಗೌರವಿಸುವ ಕಾರ್ಯವನ್ನು ಹಮ್ಮಿಕೊಂಡಿರುತ್ತೇವೆ.


ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ರಂಜಿತ್ ಕುಮಾರ್ ಬಂಡಾರು, ಸಭೆ ಅಧ್ಯಕ್ಷತೆಯನ್ನು ದಾವಣಗೆರೆಯ ಸರ್ಕಾರಿ ಕಾಲೇಜು ವಿಶ್ರಾಂತ ಪ್ರಾಚಾರ್ಯರು ದಾದಾಪೀರ್ ನವಲೇಹಾಳ್, ಚಿತ್ರದುರ್ಗ ಆಕಾಶವಾಣಿಯ ವಿಜಯಕಲಾ ಜಗಳೂರು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಯೋತಿ ರುದ್ರಮುನಿ, ದಾವಣಗೆರೆಯ ಸಂಕೇತ್, ಡಿ ಎಸ್ ನಾಗಭೂಷಣರವರು ಭಾಗವಹಿಸುವರು. 


ಸ್ಥಳೀಯ ಡಿವಿಎಸ್ ವಿದ್ಯಾಸಂಸ್ಥೆಯ ಸೃಷ್ಟಿ ಕೆ ಎನ್ , ಪ್ರೀತಂ ಟಿ ಎಂ,ಬಾಪೂಜಿ ಹೈಸ್ಕೂಲ್ ನ ಸಲ್ಮಾ ,ಪ್ರೀತಮ್ ಬಿ, ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆಯ ನಿವೇದಿತಾ ಎನ್ , ಸಹನಾ ಹೆಚ್ ಎಂ, ಸರ್ಕಾರಿ ಹೈಸ್ಕೂಲ್ ನ ವೀರೇಶ್ ಸಿ ಜಿ, ಸಿ ಡಿ ಸಿದ್ದೇಶ್, ಹರ್ಷ ಟಿ, ಲಕ್ಷ್ಮಣ ಆರ್ ಕೊಗುಂಡೆ , ಯುಪಿಎಸ್ಸಿ ನ 143 ನೇ ರಾಂಕ್ ಪಡೆದ ಕೊಗೊಂಡೆ ಸಚಿನ್,  ಸ್ಥಳೀಯ ಪೊಲೀಸ್ ಇಲಾಖೆಯಲ್ಲಿ ಹೆಡ್  ಕಾನ್ಸ್ಟೇಬಲ್ ಕಾರ್ಯನಿರ್ವಹಿಸುತ್ತಿರುವ  ನರಗನಹಳ್ಳಿಯ  ಜ್ಯೋತಿ ಎನ್ ಬಿ ಇವರಿಗೆ ಸನ್ಮಾನಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ತಪ್ಪದೆ ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ಪ್ರತಿಷ್ಠಾನದ ಅಂಜನ ರಾವ್ ತಿಳಿಸಿದ್ದಾರೆ.



إرسال تعليق

0 تعليقات
إرسال تعليق (0)
To Top