ಕಾಡಿನ ನಾಶ ಮನು ಕುಲದ ವಿನಾಶ- ಸತೀಶ್

Upayuktha
0

ಬಳ್ಳಾರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಳ್ಳಾರಿ-1 ಯೋಜನಾ ಕಛೇರಿ ವ್ಯಾಪ್ತಿಯ    ವಿದ್ಯಾ ನಗರ ವಲಯದ ಕೋಟೆ ಏರಿಯಾ ಕಾರ್ಯಕ್ಷೆತ್ರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಳ್ಳಾರಿ ತಾಲ್ಲೂಕಿನ ಕ್ಷೇತ್ರ  ಯೋಜನಾಧಿಕಾರಿಗಳು ಸತೀಶ್ ಜಿ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಭಿರುದ್ಧಿ  ಯೋಜನೆಯಿಂದ ರಾಜ್ಯಾದ್ಯಂತ ದಶಲಕ್ಷ ಗಿಡಗಳನ್ನು ಶಾಲಾ ಕಾಲೇಜು ಆವರಣದಲ್ಲಿ ದಾರ್ಮಿಕ ದೇವಾಲಯದ ಆವರಣದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಸಿಗಳನ್ನು ನಾಟಿ ಮಾಡಿಸಲಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


ಈ ಕಾರ್ಯಕ್ರಮದಲ್ಲಿ ಶಾಲೆಯ  ಮುಖ್ಯೋಪಾಧ್ಯಾಯರು ಪೂರ್ಣಿಮಾ ಅವರು ಪರಿಸರದ ಸಂರಕ್ಷಣೆಯಿಂದ ಆಗುವ ಬದಲಾವಣೆಗಳನ್ನು ಹಾಗೂ ಪರಿಸರ ನಾಶದಿಂದ ಮನುಕುಲಕ್ಕೆ ಆಗುವ ತೊಂದರೆಗಳ ಬಗ್ಗೆ ಮಕ್ಕಳಿಗೆ  ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ  ಒಕ್ಕೂಟ ಅಧ್ಯಕ್ಷರು ರಜಿನಿ. ವಲಯದ ಮೇಲ್ವಿಚಾರಕರು ಸರಸ್ವತಿ. ಕೃಷಿ ಮೇಲ್ವಿಚಾರಕರು ವಿನಯ್ ಸ್ಥಳೀಯ ಸೇವಾ ಪ್ರತಿನಿಧಿ ನಂದಿನಿ ಹಾಗೂ  ಶಾಲೆಯ ಸಹ ಶಿಕ್ಷಕರು ಹಾಗೂ ಶಾಲೆಯ ಮುದ್ದು  ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
To Top