ಮೋಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

Chandrashekhara Kulamarva
0


ಬಳ್ಳಾರಿ: ತಂಬಾಕು ಬಳಕೆಯಿಂದ ನಾನಾ ರೀತಿಯ ಕಾಯಿಲೆಗಳು ಬರುತ್ತೆ ಇಂದಿನ ಯುವಕರಲ್ಲಿ ಗುಟ್ಕಾ ಬಳಕೆ ಇರಬಹುದು ಸಿಗರೇಟ್ ಬಳಕೆಯಿಂದ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಆರೋಗ್ಯವಂತ ವ್ಯಕ್ತಿಯಿಂದ ಆರೋಗ್ಯ ಸಮಾಜ ಸೃಷ್ಟಿಯಾಗುತ್ತೆ ಹಾಗಾಗಿ ಕೆಟ್ಟ ಚಟಗಳಿಗೆ ಬಲಿಯಾಗದೆ ಆರೋಗ್ಯವಂತ  ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕೆಂದು ಡಾಕ್ಟರ್ ಭಾರತಿ ಕರೆ ನೀಡಿದರು.


ಅವರು ತಾಲೂಕಿನ ಮೋಕ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಆಸಾಂಕ್ರಾಮಿಕ ರೋಗಗಳ ಘಟಕ, ಬಳ್ಳಾರಿ, ಸಮುದಾಯ ಅರೋಗ್ಯ ಕೇಂದ್ರ ಮೋಕಾದಲ್ಲಿ ಇಂದು ವಿಶ್ವ ತಂಬಾಕು ರಹಿತ ದಿನ ಪ್ರಯುಕ್ತ ಜಾಗೃತಿ , ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.


1987 ರಲ್ಲಿ ವಿಶ್ವ ಸಂಸ್ಥೆ ತಂಬಾಕು ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯುಕ್ತ ಮತ್ತು ಆಗುವ ಸಾವು  ಹಾಗು ಕ್ಯಾನ್ಸರ್ ಗೆ ತುತ್ತಾಗುತ್ತಾರೆ ಬಾಯಿ ಕ್ಯಾನ್ಸರ್, ಶ್ವಾಸ ಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್ ಹೀಗೆ ನಾನಾ ತುತ್ತಾಗುತ್ತಾರೆ, ಆಗಿಯುವ ಹಾಗೂ ಸೇದುವ ತಂಬಾಕಿನಿಂದ ಕ್ಯಾನ್ಸರ್ ಖಚಿತವಾಗಿ ಬರುತ್ತದೆ ಎಂದು ಖುರ್ಷಿದ  ಬೇಗಂ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

  

ನಂತರ ಹಿರಿಯ ದಂತ ವೈದ್ಯರಾದ ಡಾ ಅರ್ಜುಮುನ್ನಿಸ ಮೇಡಮ್ ರವರು ಬಾಯಿ ಕ್ಯಾನ್ಸರ್ ಕಾರಣ ಹಾಗು ಬಾರದ ಹಾಗೆ ಆರೋಗ್ಯಕರ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡುತ್ತಾ ತಂಬಾಕು ಜೊತೆಗೆ ನಶೆ ಪುಡಿ ಹಳ್ಳಿ ಹೆಣ್ಣುಮಕ್ಕಳು ಬಳಸುತ್ತಾರೆ ಅದರಿಂದ ಸಹ ಬಾಯಿ ಕ್ಯಾನ್ಸರ್ ಬರತ್ತೆ ನಂತರ ಬಾಯಿಯಲ್ಲಿ ತುಂಬಾ ಸಮಯದವರೆಗೆ ಏನಾದರು ಗಾಯಗಳ ಗಿದ್ದಲ್ಲಿ ತಕ್ಷಣ ವೈ ದ್ಯರ ಹತ್ತಿರ ಅರೋಗ್ಯ ತಪಾಸಣೆ ಮಾಡಿಸಿ, ಅರೋಗ್ಯ ಕಾಪಾಡಿ ಎಂದು ಸಂಪೂರ್ಣ ಮಾಹಿತಿ ನೀಡಿದರು, ಕಾಲೇಜು ಮಕ್ಕಳು ಗುಟಕ ಮತ್ತಿತ್ತರ ಕೆಟ್ಟ ಹವ್ಯಸಗಳನ್ನು ಬಿಡಬೇಕು ಎಂದು ಮಾಹಿತಿ ನೀಡಿದರು, ನಂತರ ಗ್ರಾಮ ಪಂಚಾಯತ್ ಸದಸ್ಯರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು ವ್ಯಕ್ತಿ ಎಂದು ಇಂತಹ ಅಭ್ಯಾಸ ಗಳನ್ನು ಬಿಟ್ಟು ಅರೋಗ್ಯ ಕಾಪಾಡಿ ಸಾಮಾಜಿಕ ಕಾಳಜಿ ವಹಿಸಲು ತಿಳಿಸಿದರು,


ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧಿಕಾರಿಗಳಾದ ಉಷಾ ರಾಣಿ ಸಮುದಾಯ ಅರೋಗ್ಯ ಅಧಿಕಾರಿ ತ್ರಿಪುನ್ ಕುಮಾರ್, ಆಸಾಂಕ್ರಾಮಿಕ ಘಟಕದ ಜೈಕುಮಾರ್, ಪದ್ಮಾವತಿ, ಹನುಮ ಗೌಡ, ಯುವರಾಜ್, ಅರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲಿ ಗೌಡ ಸಾರ್ವಜನಿಕರು ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top