ಬಳ್ಳಾರಿ: ನಗರದ ಪ್ರತಿಷ್ಠಿತ ಶ್ರೀ ನಂದ ವಸತಿ ಶಾಲೆ ಮತ್ತು ಶ್ರೀ ನಂದ ಕಾಂಪೋಸಿಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 22.06.2025 ರಂದು ಬೆಂಗಳೂರಿನಲ್ಲಿ. ನಡೆದ G.W.R ಟ್ರ್ಯಾಗನ್ ಲೆಗಸಿ ಗ್ಲೋಬಲ್ ಗ್ರೂಪ್ ವರ್ಲ್ಡ್ ರೆಕಾರ್ಡ್ ಅಟೆಸ್ಟ್ ಗ್ಲೋಬಲ್ ಅಕಾಡೆಮಿ ಸಿ.ಬಿ.ಎಸ್.ಸಿ. ಬೆಂಗಳೂರಿನಲ್ಲಿ ಶ್ರೀ ನಂದ ವಸತಿ ಶಾಲೆಯ ಕುಮಾರಿ. ಕಾವ್ಯಶ್ರೀ 9ನೇ ತರಗತಿ, ಕುಮಾರ್, ಗೌತಮ್ ಡಿ. ಅರ್ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿ 30 ನಿಮಿಷಗಳ ನಿರಂತರ ಕರಾಟೆಯ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ದಾಖಲೆ ಬರೆದು ವಿಜೇತರಾಗಿದ್ದಾರೆ, ಮುಂದಿನ 9ನೇ ರಾಷ್ಟ್ರ ಮಟ್ಟದ ದೆಹಲಿಯಲ್ಲಿ ನಡೆಯುವ ಕರಾಟೆ ಪಂದ್ಯಾವಳಿಗಳಿಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇವರಿಗೆ, ನಮ್ಮ ಶಾಲೆಯ ಅಧ್ಯಕ್ಷರಾದ ವೇಮುಲಪಲ್ಲಿ ಗಾಂಧಿಯವರು ಈ ಮಕ್ಕಳ ಪ್ರೇರಣೆಯಿಂದ ಶಾಲೆಯ ಎಲ್ಲಾ ಮಕ್ಕಳು ಎಲ್ಲಾ ರಂಗದಲ್ಲೂ ತಮ್ಮ ಪ್ರತಿಭೆಯನ್ನು ಬೀರಲಿ ಎಂದು ಹಾರೈಸಿ. ಈ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಭವಿಷ್ಯದಲ್ಲಿ ಇನ್ನಿತರ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ವಹಿಸಿ ಇನ್ನಿತರ ಕ್ರೀಡೆಗಳಲ್ಲಿ ಯಶಸ್ವಿಯಾಗಲು ಮಾರ್ಗದರ್ಶನ ನೀಡಿದರು. ಶಾಲಾ ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಸಿಬ್ಬಂಧಿ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ವಿಜೇತ ವಿದ್ಯಾರ್ಥಿಗಳಿಗೆ ಶುಭಕೋರಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ