ಜೂನ್ 29; ನೃತ್ಯಾಭಿವಂದನೆ : ಸಂಭ್ರಮ ಸಂಸ್ಥೆ ಆಯೋಜನೆ

Upayuktha
0

ಪ್ರಖ್ಯಾತ ನೃತ್ಯ ವಿದುಷಿ ಉಷಾ ಬಸಪ್ಪ ಅವರಿಗೆ ಗೌರವಾರ್ಪಣೆ. 



ಬೆಂಗಳೂರು : ಹಿರಿಯ ನೃತ್ಯ ವಿದುಷಿ ಉಷಾ ಬಸಪ್ಪ ಅವರಿಗೆ ನಗರದ ಸಂಭ್ರಮ ಸಂಸ್ಥೆ ಜೂನ್ 29ರಂದು ನೃತ್ಯಾಭಿವಂದನೆ ಕಾರ್ಯಕ್ರಮದ ಮೂಲಕ ಗೌರವ ಸಮರ್ಪಣೆ ಮಾಡಲಿದೆ. ಅಂದು ಸಂಜೆ 4 ಗಂಟೆಗೆ ನಗರದ ಜೆಸಿ ರಸ್ತೆಯ ನಯನ ಸಭಾಂಗಣ ಭವನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.


ಕರ್ನಾಟಕ ಗೃಹ ಮಂಡಳಿ ಆಯುಕ್ತರಾದ ಕೆ.ಎ. ದಯಾನಂದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾತ. ಚಿಕ್ಕಣ್ಣ, ಸಂಗೀತ ವಿದುಷಿ ಕೆ. ಎಂ. ಕುಸುಮ, ಹಿರಿಯ ಮೃದಂಗ ವಿದ್ವಾಂಸ ಎಸ್. ವಿ. ಗಿರಿಧರ ಆಗಮಿಸಲಿದ್ದಾರೆ. 


ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಅವರು ಉಷಾ ಬಸಪ್ಪ ಅವರಿಗೆ ಅಭಿನಂದನೆಗಳನ್ನು ಸಮರ್ಪಿಸಲಿದ್ದಾರೆ. ನಂತರ ವಿವಿಧ ಸಂಘ ಸಂಸ್ಥೆಗಳ ಕಲಾವಿದರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಕಲಾಸಕ್ತರು ಭಾಗವಹಿಸಬೇಕು ಎಂದು ಸಂಭ್ರಮ ಸಂಸ್ಥೆ ವಿನಂತಿಸಿದೆ. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top