ಜಾನಕಿ ಕಾರ್ಖಾನೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ

Upayuktha
0


ಬಳ್ಳಾರಿ: ತಾಲೂಕಿನ  ಸಿಡಿಗಿನಮೊಳ ಗ್ರಾಮದ  ಜಾನಕಿ ಕಾರ್ಖಾನೆಯ ಆಡಳಿತ ಮಂಡಳಿಯ ವತಿಯಿಂದ,ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸೀನಿಯರ್ ಮ್ಯಾನೇಜರ್ ಆದ  ಅನ್ವರ್ ಭಾಷಾ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನವನ ಜೀವನಕ್ಕೆ ಅತ್ಯಂತ ಅವಶ್ಯಕವಾದ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.


ಅದೇ ಪ್ರಕಾರವಾಗಿ ಪ್ರತಿಯೊಬ್ಬರೂ ಸಸಿಯನ್ನು ನೆಟ್ಟು ಅದನ್ನು ಗಿಡವಾಗಿ ಮರವಾಗಿ ಬೆಳೆಸುವ ಇಚ್ಛಾಶಕ್ತಿಯನ್ನು ಹೊಂದಬೇಕು ಇದರಿಂದ ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ, ಪ್ರತಿಯೊಬ್ಬರು ಪರಿಸರವನ್ನು ಕಾಪಾಡಿಕೊಳ್ಳಬೇಕು ಪ್ರತಿಯೊಬ್ಬ ಮನುಷ್ಯನು ತಮ್ಮ ಮನೆಯ ಸುತ್ತಮುತ್ತಲು ಸಸಿಗಳನ್ನು ನೆಡಬೇಕು  ಅವುಗಳನ್ನು ಸುರಕ್ಷಿತವಾಗಿ ನೀರು ಹಾಕುವ ಮೂಲಕ ಚಿಕ್ಕ ಮಕ್ಕಳ ಹಾಗೆ  ಕಾಪಾಡಿಕೊಳ್ಳ ಬೇಕು ಅವು ನಮಗೆ ಬಿಸಿಲಲ್ಲಿ ತಂಪಾದ ನೆರಳು ಮತ್ತು ಗಾಳಿಯನ್ನು ಕೊಡುತವೆ ಇನ್ನು ಕೆಲವು ಹಿತನುಡಿಗಳನ್ನು ಕಾರ್ಮಿಕ ಸಿಬ್ಬಂದಿಗೆ ಹೇಳಲಾಯಿತು ಈ ಕಾರ್ಯಕ್ರಮದಲ್ಲಿ ಸುರಕ್ಷತೆ ವಿಭಾಗದ ಮುಖ್ಯ ಅಧಿಕಾರಿಯಾದ ವಿಶ್ವನಾಥ್ ಸರ್ ಹಾಗೂ ನಾಗಶೇಖರ್. ಅಬ್ದುಲ್ ಕಾಶಿಂ  ಜಡೇಸ್ವಾಮಿ ಮತ್ತು ಮಾಜಿ ಸೈನಿಕರು ಹಾಗೂ ಸುರಕ್ಷತೆಯ ಮುಖ್ಯ ಅಧಿಕಾರಿಗಳಾದ ಸಾಂಬಶಿವ ರಾವ್. ಹೊನ್ನೂರಪ್ಪ. ರಾಮ್ ಸಿಂಗ್ ಯಾದವ್. ಹಾಗೂ ಬಿ ಬರ್ಲಾ. ಮತ್ತು ಮಾಜಿ ಸೈನಿಕರು ಮತ್ತು ಕಲ್ಯಾಣ ಕರ್ನಾಟಕ ಮಾಜಿ ಅರೆ ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಎನ್ ಪ್ರಹ್ಲಾದ ರೆಡ್ಡಿ ಹಾಗೂ ಕಾರ್ಖಾನೆಯ ಸಿಬ್ಬಂದಿವರ್ಗ ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಮಿಕರಿಂದ ಒಂದೊಂದು ಸಸಿಯನ್ನು ನಡೆಸಲಾಯಿತು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top