ಮಂಗಳೂರಿನ ಅನನ್ಯಾ ರಾವ್ ಭಾರತೀಯ ನೌಕಾಪಡೆಗೆ ಸಬ್‌ ಲೆಫ್ಟಿನೆಂಟ್ ಆಗಿ ನೇಮಕ

Upayuktha
0

ಮಂಗಳೂರು: ಮಂಗಳೂರಿನ ಲ್ಯಾಂಡ್‌ ಲಿಂಕ್ಸ್‌ ಬಡಾವಣೆಯಲ್ಲಿ ನೆಲೆಸಿರುವ ಕುಮಾರಿ ಅನನ್ಯಾ ಮೇ 31ರಂದು ಇಂಡಿಯನ್ ನೇವಲ್ ಅಕಾಡೆಮಿ ಎಳಿಮಲದಲ್ಲಿ ನಡೆದ ಪಾಸಿಂಗ್‌ ಔಟ್‌ ಪೆರೇಡ್‌ನಲ್ಲಿ ಕಮೀಷನ್ಡ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.


ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್‌ ರಾವ್‌ ಮತ್ತು ವೀಣಾ ದಂಪತಿಗಳ ಪುತ್ರಿ ಕುಮಾರಿ ಅನನ್ಯಾ ರಾವ್‌ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಬಿಜಿಎಸ್‌ ಕಾವೂರಿನಲ್ಲಿ ವಿದ್ಯಾಭ್ಯಾಸ, ಚೈತನ್ಯ ಕಾಲೇಜ್‌, ನಲ್ಲಿ ಪಿಯುಸಿ, ಬಿ.ಟೆಕ್ ಪದವಿಯನ್ನು ಸುರತ್ಕಲ್‌ನ ಎನ್‌ಐಟಿಕೆಯಿಂದ ಮೆಕಾನಿಕಲ್‌ ವಿಭಾಗದಲ್ಲಿ ಅಧ್ಯಯನ ಮಾಡಿರುತ್ತಾರೆ.


ಬಾಲ್ಯದಿಂದ ದೇಶ ಸೇವೆಯಲ್ಲಿ ಅಭಿರುಚಿ ಹೊಂದಿದ್ದು ಭಾರತೀಯ ಸೈನ್ಯ ಸೇರಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಕಾಲೇಜಿನಲ್ಲಿ ಎನ್‌ಸಿಸಿ ತರಬೇತಿ ಹೊಂದಿದ್ದರು. ಎನ್‌ಐಟಿಕೆ ಸುರತ್ಕಲ್‌ನಿಂದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್‌ ಲೆಫ್ಟಿನೆಂಟ್‌ ಆಗಿ ನೌಕಾಪಡೆಗೆ ಆಯ್ಕೆಗೊಂಡಿದ್ದಾರೆ.


ಕುಮಾರಿ ಅನನ್ಯ ಅವರ ತಂದೆ ಸತೀಶ್‌ ರಾವ್‌ ಅವರು ದಿವ್ಯಾಂಗರ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸಂಘಟನೆ ಸಕ್ಷಮದ ಜಿಲ್ಲಾ ಖಜಾಂಜಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top