ಪತಂಜಲಿ ಯೋಗ ಸಮಿತಿಯಿಂದ 245ನೇ ಉಚಿತ ಯೋಗ ಶಿಬಿರ

Upayuktha
0


ಮಂಗಳೂರು: 245ನೇ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭ ಸಂತ ಫ್ರಾನ್ಸಿಸ್ ಹಿರಿಯ ಪ್ರಾಥಮಿಕ ಶಾಲೆ, ಬಿಜೈ ಹಾಗೂ ಪತಂಜಲಿ ಯೋಗ ಸಮಿತಿ ಜಂಟಿ ಆಶ್ರಯದಲ್ಲಿ ಬುಧವಾರ ನಡೆಯಿತು.


ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಣವ ಕೋ ಆಪರೇಟಿವ್ ಸೊಸೈಟಿ ಚೇರ್ಮೆನ್ ಪ್ರಶಾಂತ ಪೈ ವಹಿಸಿದರು. ಬೆಲೆ ಕಟ್ಟಲಾಗದ ವಿದ್ಯೆ ಯೋಗ. ಯೋಗಕ್ಕೆ ಸರಿಸಾಟಿ ಯಾವುದು ಇಲ್ಲ. ಪ್ರಸ್ತುತ ಒತ್ತಡಕ್ಕೆ ಒಳಗಾದ ಮನುಷ್ಯನಿಗೆ ಯೋಗ ಅತ್ಯವಶ್ಯಕವೆಂದರು.


ಮುಖ್ಯ ಸಂಪನ್ಮೂಲ ಅತಿಥಿಯಾಗಿ ಚುಟುಕು ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರು, ಸಾಹಿತಿ ಇರಾ ನೇಮ ಪೂಜಾರಿ, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಡಾ. ಜಿ.ಕೆ. ಭಟ್ ಹಾಗೂ ವೈಲ್ಟರ್ ಡಿಸೋಜ ಉಪಸ್ಥಿತರಿದ್ದರು. ಯೋಗ ಗುರು ಡಾ. ಜಗದೀಶ್ ಶೆಟ್ಟಿ ಬಿಜೈ ಹಾಗೂ ಯೋಗ ಶಿಕ್ಷಕಿ ಭಾರತಿ ಶೆಟ್ಟಿ ಶಾಲೆಯ ಮುಖ್ಯೋಪಾಧ್ಯಾಯನಿ ನಿರ್ಮಲಾ ಸಿಲ್ವಿಯ ಡಿಸೋಜ ಉಪಸ್ಥಿತರಿದ್ದರು. ಡಾ. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಲ್ವಿಯಾ ಡಿಸೋಜ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top