ಮೌಲ್ಯಯುತ ಸಂಸ್ಕಾರ ಶಿಕ್ಷಣ ಶಿಬಿರ ಸಂಪನ್ನ

Upayuktha
0

ಕುಚ್ಚೂರು : ಶ್ರೀವಿಬುಧೇಶತೀರ್ಥ ಚಾರಿಟೇಬಲ್ ಟ್ರಸ್ಟ್, ಶ್ರೀಅದಮಾರು ಮಠ ವತಿಯಿಂದ ಶಾಂತಿನಿಕೇತನ ಯುವ ವೃಂದ( ರಿ ), ಕುಡಿಬೈಲು, ಕುಚ್ಚೂರು ಇಲ್ಲಿನ ವಿದ್ಯಾರ್ಥಿಗಳಿಗೆ ಶ್ರೀಶ್ರೀಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ವಸತಿ ಸಹಿತ ವಿಶೇಷ ತರಬೇತಿ ಶಿಬಿರ, 'ಮೌಲ್ಯಯುತ ಸಂಸ್ಕಾರ ಶಿಕ್ಷಣ' ವನ್ನು ಶ್ರೀಅದಮಾರು ಮಠದ ಹಿರಿಯ ಯತಿಗಳಾದ ಶ್ರೀಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಾ. 5 - 5- 2025ರಂದು ಶ್ರೀವಿಬುಧೇಶತೀರ್ಥ ಸಭಾಂಗಣದಲ್ಲಿ ಉದ್ಘಾಟಿಸಿ ಅನುಗ್ರಹ ಸಂದೇಶ ವನ್ನಿತ್ತರು. 

ಶ್ರೀಪಾದರು ಶಿಬಿರದ ಔಚಿತ್ಯ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿಸುತ್ತಾ ದೇಶಭಕ್ತಿಯನ್ನು ಈಗಿಂದಲೇ ರೂಢಿಸಿಕೊಳ್ಳು ವಂತೆ ಮಕ್ಕಳಿಗೆ ತಿಳಿ ಹೇಳಿದರು. ಶಾಲೆಗಳಲ್ಲಿ ಶಿಕ್ಷಕರು ತಿಳಿಸದ, ಪೋಷಕರಿಗೂ ಗೊತ್ತಿರದ, ಯಾವುದೇ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ  ವಿಧಾನವನ್ನು ಮಕ್ಕಳಿಗೆ ಬೋಧಿಸಿದರು. 

ಶಿಬಿರದ ಪಾಠ್ಯಪುಸ್ತಕ ಮತ್ತು ಕಥಾ ಪುಸ್ತಕವನ್ನು ಶ್ರೀಪಾದರು ಮಕ್ಕಳಿಗೆ ಅನುಗ್ರಹ ಮಂತ್ರಾಕ್ಷತೆಯೊಂದಿಗೆ ನೀಡಿದರು. 
ಶಿಬಿರದ ಉದ್ದೇಶವನ್ನು ವ್ಯವಸ್ಥಾಪಕರಾದ ಶ್ರೀ ಗೋವಿಂದರಾಜ್ ಅವರು ವಿವರಿಸಿದರು. ಶಾಂತಿನಿಕೇತನ ಯುವ ವೃಂದ( ರಿ ), ಕುಡಿಬೈಲು, ಕುಚ್ಚೂರು ಇದರ ಅಧ್ಯಕ್ಷರಾದ ರಾಜೇಶ ಅವರು ಶ್ರೀಪಾದರಿಗೆ ಗೌರವಾರ್ಪಣೆ ಸಲ್ಲಿಸಿ, ಧನ್ಯವಾದಗಳನ್ನು ಸಮರ್ಪಿಸಿದರು.

 ಶಿಬಿರದ ಸಂಪನ್ಮೂಲ ವೃಕ್ತಿಯಾದ ಶ್ರೀ ಓಂ ಪ್ರಕಾಶ ಭಟ್ಟರು ಶಿಬಿರದಲ್ಲಿ ಹೇಳಿಕೊಡುವ ವಿವಿಧ ವಿಷಯಗಳಾದ ಕಥೆ, ನಿತ್ಯ ಶ್ಲೋಕಗಳು , ಗೀತೆ, ಕೀರ್ತನೆ, ರಂಗೋಲಿ, ಪುಸ್ತಕ ಓದು, ಆರ್ಟ್ ಮತ್ತು ಕ್ರಾಫ್ಟ್ ತರಗತಿ, ಯೋಗಾಭ್ಯಾಸ, ಭಾರತೀಯ ಕ್ರೀಡೆಗಳು ಮುಂತಾದವುಗಳ ಬಗ್ಗೆ ತಿಳಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top