ವಿಶ್ವ ಆರೋಹ 2025 ಶೈಕ್ಷಣಿಕ ಔದ್ಯೋಗಿಕ ಕಾರ್ಯಾಗಾರ

Upayuktha
0


ಬಂಗ್ರ ಮಂಜೇಶ್ವರ: ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ, ವಿದ್ಯಾರ್ಥಿ-ಶಿಕ್ಷಕ-ರಕ್ಷಕ-ಮಾರ್ಗದರ್ಶಕರ ನಡುವೆ ಅಭೂತಪೂರ್ವ ಸಂವಾದ ಏರ್ಪಡಿಸುತ್ತಿರುವ ವಿಶ್ವ ಆರೋಹ- 2025 ಶೈಕ್ಷಣಿಕ ಔದ್ಯೋಗಿಕ ಕಾರ್ಯಾಗಾರದ ಮೂರನೇ ಆವೃತ್ತಿಯು  ಭಾನುವಾರದಂದು ಬಂಗ್ರ ಮಂಜೇಶ್ವರದ ಶ್ರೀ ಕಾಳಿಕಾ ಪರಮೇಶ್ವರೀ ಸಭಾಭವನದಲ್ಲಿ ಜರಗಿತು.


ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಸಮಾಜ ಸಭಾ ಇದರ ಮಂಗಳೂರು ಪ್ರಾಂತ್ಯದ ವತಿಯಿಂದ ನಡೆದ ಈ ಉಚಿತ ಕಾರ್ಯಾಗಾರವನ್ನು ಪ್ರಾಂತ್ಯಸಮಿತಿ ಅಧ್ಯಕ್ಷ ಐಲ ಚಂದ್ರಶೇಖರ ಆಚಾರ್ಯ ಉದ್ಘಾಟಿಸಿದರು. 


ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಪುರೋಹಿತ ಪ್ರಕಾಶ್ ಚಂದ್ರ ಶ್ರೌತಿ, ಸಮಾಜ ಸಭಾ ಅಧ್ಯಕ್ಷ  ಬಿಎಂ ಯದುನಂದನ ಆಚಾರ್ಯ, ಹಿರಿಯ    ಸದಸ್ಯ ಎಂ ಮೋಹನ ಆಚಾrರ್ಯ ಕೋಟೆಕಾರ್, ಓಜ ಸಾಹಿತ್ಯ ಕೂಟ ಅಧ್ಯಕ್ಷ ಮೋಹನ ಚಂದ್ರ ಆಚಾರ್ಯ, ಮಹಿಳಾ ಸಂಘದ ಉಪಾಧ್ಯಕ್ಷೆ ಉಷಾ ಚಿನ್ಮಯ ನಂದಾಚಾರ್ಯ, ಮಂಗಳೂರು ಪ್ರಾಂತ್ಯ ಮೊಕ್ತೇಸರ ಎಸ್ ಕೆವಿ ಮೋಹನ್ ದಾಸ್ ಆಚಾರ್ಯ ಭಾಗವಹಿಸಿದ್ದರು.

 


ಡಾ. ಬಾಲಕೃಷ್ಣ ಬಿ ಎಂ ಹೊಸಂಗಡಿ ಮತ್ತು ವಿನೀತ್ ಕುಮಾರ್ ಕೆಎನ್ ದಿಕ್ಸೂಚಿ ಭಾಷಣ ಮಾಡಿದರು. 


ಯೋಗ ಶಿಕ್ಷಣ ಕುರಿತು ಯು ಎಲ್ ಸದ್ಯೋಜಾತ ಆಚಾರ್ಯ ಕೊಲ್ಯ ಪ್ರಾತ್ಯಕ್ಷಿಕೆ ನೀಡಿದರು. ಜೆ.ಸಿ.ಐ. ಯ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಇನ್ನಾ ಎರಡು ಗಂಟೆಗಳ ಅವಧಿಯ ಪ್ರೇರಣ ಕಾರ್ಯಾಗಾರ ನಡೆಸಿಕೊಟ್ಟರು. ಮಧ್ಯಾಹ್ನ ನಂತರದ ಗೋಷ್ಠಿಗಳಲ್ಲಿ ಡಾ. ಅಶೋಕ ಆಚಾರ್ಯ ಸಕಲೇಶಪುರ, ಡಾ. ಪ್ರಜ್ವಲ್ ಆಚಾರ್ಯ ಕೋಟೆಕಾರ್, ಡಾ. ಪ್ರಜ್ಞಾ ಪ್ರಜ್ವಲ್ ಆಚಾರ್ಯ ಕೋಟೆಕಾರ್ ವೈದ್ಯಕೀಯ ಶಿಕ್ಷಣದ ಮಾಹಿತಿ ನೀಡಿದರು. 


ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣದ ಕುರಿತ ಗೋಷ್ಠಿಯನ್ನು ಡಾ. ಗೋಪಾಲಕೃಷ್ಣ ಆಚಾರ್ಯ ದೆಹಲಿ, ಅನಂತ್ ಆಚಾರ್ಯ ಬೆಂಗಳೂರು, ಅಶೋಕ್ ನವದೆಹಲಿ  ನಿರ್ವಹಿಸಿದರು. ಬ್ಯಾಂಕಿಂಗ್ ಮತ್ತು  ಚಾರ್ಟರ್ಡ್ಅಕೌಂಟೆಂಟ್ ಗೋಷ್ಠಿಯಲ್ಲಿ ಎಂ ಮೋಹನ ಆಚಾrರ್ಯ, ಐಲ ಚಂದ್ರಶೇಖರ ಆಚಾರ್ಯ, ಪುತ್ತೂರು ಮಹೇಶ್ ಪ್ರಸಾದ್ ಆಚಾರ್ಯ ಬೆಂಗಳೂರು ಮತ್ತು ಅಡ್ಯನಡ್ಕ ಗಿರೀಶ್ ಆಚಾರ್ಯ ಮಂಗಳೂರು ಮಾಹಿತಿ ನೀಡಿದರು. 


ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ನಿವೃತ್ತ ಸಹಾಯಕ ಕಮಿಷನರ್ ಮುರಳೀಧರ ಆಚಾರ್ಯ ಉಡುಪಿ ಕೆ.ಎ.ಎಸ್ ಮತ್ತು ಮಂಗಳೂರಿನ ಸರ್ವಜ್ಞ ಐ.ಎ.ಎಸ್ ಅಕಾಡೆಮಿ ನಿರ್ದೇಶಕ ಸುರೇಶ್ ಎಂ. ಎಸ್. ವಿವರಿಸಿದರು. ಮನೋಹರ ಆಚಾರ್ಯ ಬೆಂಗಳೂರು, ಎನ್ ಎಸ್ ಪತ್ತಾರ್ ಮಂಗಳೂರು, ಜೆಪಿ ಆಚಾರ್ಯ ಕೋಟೆಕಾರ್, ದಿವಾಕರ ಕೋಟೆಕಾರ್ ಚಿತ್ರಕಲೆ ಮತ್ತು ಶಿಲ್ಪಕಲೆ ಕುರಿತು ತಿಳಿಸಿದರು. 


ಇದೇ ಸಂದರ್ಭದಲ್ಲಿ ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ವಿಜೇತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರನ್ನು ಅಭಿನಂದಿಸಲಾ ಯಿತು. ಅಭಿನಂದನ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ ಪ್ರಭಾಕರ ಆಚಾರ್ಯ, ಪುತ್ತೂರು ವಿಶ್ವಕಲಾಮೃತದ ಸದಾಶಿವ ಆಚಾರ್ಯ, ಕಾಸರಗೋಡು ವಿಶ್ವ ದರ್ಶನ ಮತ್ತು ವಿಶೇಷ ಚಾನೆಲ್ ನ ಜಯ ಮಣಿಯಂಪಾರೆ, ಸುರತ್ಕಲ್ ಯೋಗೇಂದ್ರ ಆಚಾರ್ಯ, ಜಯಕೇಶ ಕೆ ಆಚಾರ್ಯ ಮಂಗಳೂರು ಭಾಗವಹಿಸಿದ್ದರು.


ಐಲ ಚಂದ್ರಶೇಖರ ಆಚಾರ್ಯ ಸ್ವಾಗತಿಸಿ, ತುಷಾರ್ ಆಚಾರ್ಯ ವಂದಿಸಿದರು. ಪವಿತ್ರ ಮಿಥುನ್ ಆಚಾರ್ಯ ಪುತ್ತೂರು ಮತ್ತು ಉದಯ ಭಾಸ್ಕರಾಚಾರ್ಯ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.


ಬೆಂಗಳೂರು, ಮಂಗಳೂರು, ಕೋಟೆಕಾರು, ಮಂಜೇಶ್ವರ, ಕುಂಬಳೆ, ಪುತ್ತೂರು, ಕಾಸರಗೋಡು, ಕೊಯಂಬತ್ತೂರು ಮುಂತಾದ ಪ್ರದೇಶಗಳ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅರಿವಿನ ತೊಟ್ಟಿಲು ಪುಸ್ತಕ ಪ್ರದರ್ಶನ, ಪುಸ್ತಕ ವಿತರಣೆ, ಶೈಕ್ಷಣಿಕ ದತ್ತು ಯೋಜನೆ,   ಭವಿಷ್ಯದ ಕನಸುಗಳು ಒಣಮರಕ್ಕೆ ಹಸಿರೆಲೆ ಜೋಡಿಸುವ ಕಾರ್ಯಕ್ರಮಗಳು ಜರಗಿದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top