ವಿವೇಕಾನಂದ ಕಾಲೇಜು: ಹಿರಿಯ ವಿದ್ಯಾರ್ಥಿಗಳ ಮರು ಸಮ್ಮಿಲನ

Upayuktha
0


ಪುತ್ತೂರು: ‘ಸಮಾಜದ ಮೌಲ್ಯಗಳು ಕುಗ್ಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿವೇಕಾನಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿ ಹೊರಗೆ ಹೋದ ಹಲವು ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದು ಸೇರಿರುವುದು ಒಂದು ಉತ್ತಮ ಸಂಗತಿಯಾಗಿದೆ. ಹಿರಿಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ ದೊಡ್ಡ ಅಸ್ತಿ.  ಈ ಮೂಲಕ ಪ್ರಸ್ತುತ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು. ಹೀಗೆ ಎಲ್ಲರೂ ಸೇರಿ ಶಿಕ್ಷಣವನ್ನು ಒಗ್ಗಟ್ಟಾಗಿ ಬೆಳೆಸಬಹುದು'. ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಬೈಂದೂರು ಪ್ರಭಾಕರ್ ರಾವ್ ಸಭಾಭವನನದಲ್ಲಿ ನಡೆದ 1967-1970ರ  ಬಿ.ಎಸ್ಸಿಯ ಬಿಝೆಡ್ ಸಿಯ ಹಿರಿಯ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಹೊರಗೆ ಹೋಗಿ 55 ವರ್ಷಗಳ ನಂತರ ನಡೆದ ಮೊದಲ ಮರು ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದರು.


ಕಾರ್ಯಕ್ರಮಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸುಂದರ್ ಭಟ್ ಮಾತನಾಡಿ, ' ಗುರುವಿನ ಮಹತ್ವ ಯಾವಾಗಲೂ ಅವರ ವಿದ್ಯಾರ್ಥಿಗಳು ನೀಡುವ ಗೌರವದಲ್ಲಿ ಅಡಗಿರುತ್ತದೆ ಮತ್ತು ಗುರು ಶಿಷ್ಯರ ನಡುವೆ ಯಾವಾಗಲು ಉತ್ತಮ ಸಂಬಂಧ ಬೆಳೆಯುವುದು ಮುಖ್ಯ ' ಎಂದು ಹೇಳಿದರು. 


ಈ ಸಂದರ್ಭದಲ್ಲಿ ನಿವೃತ್ತ ವಿಶ್ರಾಂತ ಪ್ರಾಧ್ಯಾಪಕರುಗಳಾದ ಸುಂದರ ಭಟ್, ವಿ. ಬಿ. ಅರ್ತಿಕಜೆ, ಎ. ವಿ ನಾರಾಯಣ ಹಾಗೂ ವತ್ಸಲಾ ರಾಜ್ಞಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ರಾವ್  ಮೊದಲಾದವರು ಉಪಸ್ಥಿತರಿದ್ದರು.


ಕೃಷಿಕ ಬಾಲಕೃಷ್ಣ ಕೊಲಾರಿ, ವಿಶ್ರಾಂತ ವಿಜಯ ಬ್ಯಾಂಕ್ ಉದ್ಯೋಗಿ ಚಂದ್ರಶೇಖರ ರೈ, ಮುಂಬಯಿಯ ನ್ಯಾಯವಾದಿ ಗಂಗಾಧರ ಶಾಸ್ತ್ರಿ, ಕೃಷಿಕ ಗಣಪತಿ ಭಟ್ ಕೊನಡ್ಕ, ವಿಶ್ರಾಂತ ಶಿಕ್ಷಕ ಗೋವಿಂದ ಚಿಪ್ಳುಂಕರ್, ಬೆಂಗಳೂರಿನ ನೋಟರಿ ಇದಿನಬ್ಬ ಅಡೆಂಬಳ, ವಿಶ್ರಾಂತ ವಿಜಯ ಬ್ಯಾಂಕ್ ಉದ್ಯೋಗಿ ಲಕ್ಷ್ಮೀನಾರಾಯಣ ಶೆಟ್ಟಿ, ವಿಶ್ರಾಂತ ಕೆನರಾ ಬ್ಯಾಂಕ್ ಉದ್ಯೋಗಿ ಶ್ರೀಶ ಪೈ, ಮಂಗಳೂರಿನ ನ್ಯಾಯವಾದಿ ತಿರುಮಲೇಶ್ವರ ಭಟ್ ಒಡಿಯೂರು ಮತ್ತು ಕೇರಳದ ಗ್ರಾಮೀಣ ಬ್ಯಾಂಕ್ ನ ವಿಶ್ರಾಂತ ಉದ್ಯೋಗಿ ಶ್ರೀಧರ ಕೆದಿಲಾಯ ಇವರುಗಳು ಭಾಗವಹಿಸಿ 55 ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿ ಸಂಭ್ರಮಿಸಿದರು.


ಮುಂಬಯಿಯ ನ್ಯಾಯವಾದಿ ಹಾಗೂ ಹಿರಿಯ ವಿದ್ಯಾರ್ಥಿ ಗಂಗಾಧರ ಶಾಸ್ತ್ರೀ  ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top