ತೆಂಕನಿಡಿಯೂರು: ಭಜನಾ ಮಂದಿರ ಉದ್ಘಾಟನೆ, ಶ್ರೀ ಕಾಳಿಕಾಂಬಾ ದೇವಿಯ ಪುನರ್ ಪ್ರತಿಷ್ಠೆ ಸಂಪನ್ನ

Upayuktha
0


ಉಡುಪಿ: ಶ್ರೀ ಕಾಳಿಕಾಂಬಾ ಭಜನಾ ಸಂಘ ತೆಂಕನಿಡಿಯೂರು ಇದರ ನೂತನ ಗರ್ಭಗುಡಿ ಹಾಗೂ ಭಜನಾ ಮಂದಿರದ ಉದ್ಘಾಟನೆಯು ಇತ್ತೀಚೆಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಶ್ರೀ ವಿಶ್ವನಾಥ್ ಪುರೋಹಿತ್ ರ ಮಾರ್ಗದರ್ಶನದಲ್ಲಿ ನೆರವೇರಿತು.


ಈ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಅನಂತ ಶ್ರೀ ವಿಭೂಷಿತ ಕಾಳಹಸ್ತೆಂದ್ರ ಮಹಾಸ್ವಾಮಿಯಗಳ ಉಪಸ್ಥಿತರಿದ್ದರು.


“ಭಜನಾ ಮಂದಿರಗಳು ಬಾಲ ಸಂಸ್ಕಾರ ಕೇಂದ್ರಗಳು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಮತ್ತು ನಮ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಿಂದೆ ಬಾಲಸಂಸ್ಕಾರ ಕೇಂದ್ರಗಳಲ್ಲಿ ಕಲಿತ ಮಕ್ಕಳೇ ಕಾರ್ಯಕರ್ತರಾಗಿ ಮುನ್ನಡೆಸುತ್ತಿರುವುದು ಅಭಿನಂದನಾರ್ಹ. ನೂತನ ಗರ್ಭಗುಡಿ ನಿರ್ಮಾಣದಲ್ಲಿ ತೊಡಗಿಸಿಕೊಂಡ ಸರ್ವರಿಗೂ ಭವಿಷ್ಯ ಉಜ್ವಲವಾಗಿರಲಿ" ಎಂದು ಹಾರೈಸುತ್ತಾ ಆಶಿರ್ವಚನ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷರ ಟಿ ಕೃಷ್ಣ ಆಚಾರ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆನೆಗುಂದಿ ಗುರು ಸೇವಾ ಪರಿಷತ್ ತೆಂಕನಿಡಿಯೂರು ಮಂಡಲದ ಅಧ್ಯಕ್ಷ ದಯಾನಂದ ಆಚಾರ್ಯ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನೂತನ ಗರ್ಭಗುಡಿ ಹಾಗೂ ಭಜನಾಮಂದಿರದ ಕಟ್ಟಡದ ಮಹಾದಾನಿ ಎಂ. ವಾಸುದೇವ ಆಚಾರ್ಯ, ಗೀತಾ ಸಾ ಮಿಲ್‌ ಮಲ್ಪೆ ಹಾಗೂ ಮನೆ ಮನೆಗೆ ಭಜನೆ ಎಂಬ ವಿನೂತನ ಕಾರ್ಯಕ್ರಮದ ದಾನಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಶ್ರೀದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಶ್ರೀಮತಿ ಅಪ್ಪಿ ಶಿವಯ್ಯ ಆಚಾರ್ಯ, ಅಧ್ಯಕ್ಷೆ ಶ್ರೀಮತಿ ಸುಶೀಲ ವಾದಿರಾಜ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರ ಅಧ್ಯಕ್ಷ ಪ್ರದೀಪ್ ಆಚಾರ್ಯ ಹಾಗೂ ತೆಂಕನಿಡಿಯೂರು ಕೂಡುವಳಿಕೆಯ ಗ್ರಾಮ ಮೊಕ್ತೇಸರ  ಪ್ರದೀಪ ಆಚಾರ್ಯ ತೆಂಕನಿಡಿಯೂರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನಿವೃತ್ತ ತಹಶಿಲ್ದಾರ ಕೆ. ಮುರಳೀಧರ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಮೇಶ್ ಜೆ ಆಚಾರ್ಯ ಸ್ವಾಗತಿಸಿ,  ರವೀಂದ್ರ ಆಚಾರ್ಯ ಇವರು ವಂದಿಸಿದರು. ಶ್ರೀಮತಿ ಸುಷ್ಮಾ ರಾಜೇಶ್ ಆಚಾರ್ಯ ನಿರೂಪಿಸಿದರು. ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಶ್ರೀಮತಿ ಸುಚಿತ್ರ, ಮಾಧವ ಕೆ ಆಚಾರ್ಯ ಉಪಸ್ಥಿತರಿದ್ದರು.


ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ಶ್ರೀದೇವಿ ಮಹಿಳಾ ಮಂಡಳಿ ಬಾಲ ಸಂಸ್ಕಾರ ಕೇಂದ್ರ ಹಾಗೂ ಅತಿಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top