ಮಜೂರು ಗ್ರಾ.ಪಂ. ಬಜೆಟ್ ನಲ್ಲಿ ಭಾರತೀಯ ಸೇನೆಗೆ ರೂ.10.00 ಲಕ್ಷ ದೇಣಿಗೆ ಮೀಸಲು

Chandrashekhara Kulamarva
0



ಉಡುಪಿ: ಕಾಪು ತಾಲೂಕು ಮಜೂರು ಗ್ರಾಮ ಪಂಚಾಯತ್ ವಾರ್ಷಿಕ ಬಜೆಟ್ ನಲ್ಲಿ  ಭಾರತ- ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ, ಪಾಕಿಸ್ತಾನದ ವಿರುದ್ದ ಯುದ್ದ ನಡೆಯುವ ಸಂದರ್ಭ ಎದುರಾದಲ್ಲಿ ರಾಷ್ಟ್ರ ಮತ್ತು ಸೈನಿಕರ ಹಿತದೃಷ್ಟಿಯಿಂದ ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ  ರೂ.10.00 ಲಕ್ಷ ಮೊತ್ತವನ್ನು  ಬಜೆಟ್ ನಲ್ಲಿ ಮೀಸಲಿರಿಸಿದೆ. 


ಈ ಬಗ್ಗೆ ಗ್ರಾ.ಪಂ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ವಳದೂರು ಹಾಗೂ ಉಪದ್ಯಾಕ್ಷರಾದ ಮಂಜುಳಾ ಆಚಾರ್ಯ  ತಿಳಿಸಿದ್ದಾರೆ. ಮಜೂರು ಗ್ರಾಮ ಪಂಚಾಯತ್ ಈ ಹಿಂದಿನಿಂದಲೂ  ಉತ್ತಮ ಆಡಳಿತ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು  ಕೆಲಸ ಕಾರ್ಯಗಳನ್ನು  ಮಾಡುತ್ತಿದೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತ ಉಗ್ರರ ಅಡಗುತಾಣಗಳನ್ನು ದ್ವಂಸ ಮಾಡುತ್ತಿರುವುದು ಹೆಮ್ಮಯ ಸಂಗತಿ.


ಭಾರತ-ಪಾಕಿಸ್ತಾನ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದ್ದು, ಒಂದು ವೇಳೆ ಯುದ್ದ ನಡೆದರೆ ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ನೆರವು ನೀಡುವುದು ಗ್ರಾಮ ಪಂಚಾಯತ್ ಕರ್ತವ್ಯವಾಗಿದೆ. ಈ ಬಗ್ಗೆ ಕಾಪು ವಿಧಾನಸಭಾ ಕ್ಷೇತ್ರದ ಮಾನ್ಯ  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಯವರ ಜೊತೆ ಚರ್ಚಿಸಿದಾಗ  ದೇಶಕ್ಕೆ ಆಪತ್ತು ಎದುರಾದಗ ಪ್ರತಿಯೊಬ್ಬ ನಾಗರೀಕನು  ಸೈನ್ಯದ ಜೊತೆ ಕೈಜೋಡಿಸಬೇಕು, ಮಜೂರು ಗ್ರಾಮ ಪಂಚಾಯತ್ ತೆಗೆದುಕೊಂಡ ನಿರ್ಧಾರ ದೇಶದಲ್ಲೆ ಪ್ರಥಮ ಮತ್ತು ಐತಿಹಾಸಿಕ ನಿರ್ಣಯವಾಗಿದೆ. ಇದು ಇತರ ಪಂಚಾಯತ್ ಗಳಿಗೂ ಪ್ರೇರಣೆಯಾಗಲಿದೆ ಎಂದು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top