ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಟ್ರಾಲಿ ಬ್ಯಾಗ್ ಕಾಣೆ: ದಯವಿಟ್ಟು ಮಾಹಿತಿ ನೀಡಿ

Upayuktha
0



ನಾವು ದಿನಾಂಕ 23.05.2025 ರಂದು ಸಂಜೆ 7 ಗಂಟೆಗೆ ಪುತ್ತೂರಿನಿಂದ ಮಂಗಳೂರಿಗೆ ಮೈಸೂರು-ಮಂಗಳೂರು ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ನಮ್ಮ ಟ್ರಾಲಿ ಬ್ಯಾಗ್‌ನೊಂದಿಗೆ ಪ್ರಯಾಣಿಸುತ್ತಿದ್ದೆವು. ಬಸ್ ತುಂಬಾ ಜನದಟ್ಟಣೆಯಿಂದ ಕೂಡಿತ್ತು ಮತ್ತು ಕಂಡಕ್ಟರ್ ನಮ್ಮ ಬ್ಯಾಗ್ ಅನ್ನು ನನ್ನಿಂದ (ಶ್ರೀ ಅನಿರುದ್ಧ ವಸಿಷ್ಠ ಎಸ್ ಆರ್  90087 61663) ತೆಗೆದುಕೊಂಡು ಪಕ್ಕಕ್ಕೆ ಇಟ್ಟರು. ನಮ್ಮ ಕಣ್ಣನೋಟದಿಂದ ದೂರಕ್ಕೆ ಬ್ಯಾಗನ್ನು ಸೆಳೆದು ಇರಿಸಿದ ಮೇಲೆ ಅದರ ಬಗ್ಗೆ ಕಂಡಕ್ಟರ್ ಕೂಡ ಜವಾಬ್ದಾರನೇ ಆಗಿರುತ್ತಾನೆ. ನಾವು ನಮ್ಮ ನಿಲ್ದಾಣ ಅಂದರೆ ಮಂಗಳೂರು ಬಿಜೈನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಳಿಯುವಾಗ ನಮ್ಮ ಟ್ರಾಲಿ ಬ್ಯಾಗ್ ಬಗ್ಗೆ ಕಂಡಕ್ಟರ್ ಬಳಿ ವಿಚಾರಿಸಿದೆವು. ಆಗ ಅವರು ತುಂಬಾ ನಿರ್ಲಕ್ಷ್ಯದಿಂದ ಮಾತನಾಡಿ ನನಗೆ ಗೊತ್ತಿಲ್ಲ ಎಂದು ಹೇಳಿದರು. ಬಂಟ್ಸ್ ಹಾಸ್ಟೆಲ್ ಅಥವಾ ಪಿವಿಸಿ ನಿಲ್ದಾಣದಲ್ಲಿ ಯಾರೋ ನಿಮ್ಮ ಟ್ರಾಲಿ ಬ್ಯಾಗ್ ತೆಗೆದುಕೊಂಡು ಇಳಿದು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು. ನಾವು ಪ್ರಯಾಣಿಸಿದ ಬಸ್ ನೋಂದಣಿ ಸಂಖ್ಯೆ KA 09 5006.


ಬಿಜೈನಲ್ಲಿ ಬಸ್ ಇಳಿದ ಬಳಿಕ ನಿಲ್ದಾಣದ ಅಧಿಕಾರಿಗಳ ಜತೆ ಮಾತನಾಡಿ ದೂರು ನೀಡಲಾಗಿದೆ. ಜತೆಗೆ ಪೊಲೀಸ್ ಇಲಾಖೆಗೂ ಆನ್‌ಲೈನ್ ಮೂಲಕ ದೂರು ಸಲ್ಲಿಸಲಾಗಿದೆ.


ನಮ್ಮ ಟ್ರಾಲಿ ಬ್ಯಾಗನ್ನು ತೆಗೆದುಕೊಂಡು ಹೋದವರು ಉದ್ದೇಶಪೂರ್ವಕವಲ್ಲದೆ ಅಚಾತುರ್ಯದಿಂದ ತೆಗೆದುಕೊಂಡು ಹೋಗಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಬ್ಯಾಗನ್ನು ಹಿಂದಿರುಗಿಸಬೇಕಾಗಿ ಕೋರಿಕೆ. ಅದೇ ರೀತಿ ಸಾರ್ವಜನಿಕರು ಯಾರಾದರೂ ಇದನ್ನು ಗಮನಿಸಿದ್ದಲ್ಲಿ ಮಾಹಿತಿ ನೀಡಬೇಕಾಗಿ ಕೋರಿಕೆ.


ಜತೆಗೆ, ಉಡಾಫೆಯಿಂದ ವರ್ತಿಸಿದ ಕಂಡಕ್ಟರ್ ಮೇಲೆಯೂ ಶಿಸ್ತು ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ.


- ಅನಿರುದ್ಧ ವಸಿಷ್ಠ ಎಸ್.ಆರ್

ಶಿವಮೊಗ್ಗ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top