ಸಮಾಜಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡ ಸದಾಶಿವ್ ಜೀ: ಧಾ. ಮಾ. ರವೀಂದ್ರ

Chandrashekhara Kulamarva
0


ಮಂಗಳೂರು: ಮೇ 5 ರಂದು ನಿಧನರಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಹಿರಿಯ ಪ್ರಚಾರಕರು,  ಆರೋಗ್ಯ ಭಾರತಿ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರು ಮತ್ತು ಆರೋಗ್ಯ ಭಾರತಿ ದಕ್ಷಿಣ ಕ್ಷೇತ್ರದ ಸಂಯೋಜಕರು, ಅಖಿಲ ಭಾರತ ಸ್ವಸ್ಥ ಗ್ರಾಮ ಪ್ರಮುಖ ಆಗಿದ್ದ ಶ್ರೀ ಸದಾಶಿವ ಜೀ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಭಾರತಿ ಮತ್ತು ಆರೋಗ್ಯ ಭಾರತಿ ವತಿಯಿಂದ ಭಾನುವಾರ (ಮೇ18) ಸಂಘ ನಿಕೇತನದಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಿತು.


ಹಿರಿಯ ಪ್ರಚಾರಕರಾದ  ಧಾ. ಮಾ. ರವೀಂದ್ರಜೀ ಅವರು ಮಾತನಾಡಿ, ಸದಾಶಿವಜೀ ಅವರ ಸೇವಾ ತತ್ಪರತೆ ಮತ್ತು ಕಾರ್ಯ ವೈಖರಿಯನ್ನು ಕೊಂಡಾಡಿದರು. ಸಮಾಜದ ಸೇವೆಗಾಗಿ ಸರ್ವಸ್ವವನ್ನು ಸಮರ್ಪಿಸಿಕೊಂಡ ಸದಾಶಿವಜೀ ಅವರಿಗೆ ಮೋಕ್ಷ ಸಿಕ್ಕೇ ಸಿಗುತ್ತದೆ ಎಂದು ಹಾರೈಸಿದರು.


ಮಂಗಳೂರು ವಿಭಾಗ ಸಂಘ ಚಾಲಕರಾದ ಡಾ ನಾರಾಯಣ ಶೆಣೈ, ಮಂಗಳೂರು ಮಹಾನಗರ ಸಂಘ ಚಾಲಕರಾದ ಡಾ ಸತೀಶ್ ರಾವ್, ಚೆನ್ನಯ್ಯ ಸ್ವಾಮಿ, ಡಾ ಅಜೇಯ ರಾವ್, ಡಾ ಮುರಲೀ ಮೋಹನ್ ಚೂಂತಾರು ನುಡಿ ನಮನ ಸಲ್ಲಿಸಿದರು. ಪುರುಷೋತ್ತಮ ದೇವಸ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ನಂದೋಡಿ ಧನ್ಯವಾದ ಸಮರ್ಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top