ಸರಯೂ "ಯಕ್ಷ ಪಕ್ಷ" ಉದ್ಘಾಟನೆ, "ಯಕ್ಷಾರ್ಯ" ಬಿಡುಗಡೆ

Upayuktha
0


ಮಂಗಳೂರು: "ಯಕ್ಷಾಗಾನಕ್ಕೆ ದಾಖಲೀಕರಣದ ಅಗತ್ಯವಿದೆ. ಎಳೆಯ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಿಗೆ ಸುಲಭಸಾಧ್ಯವಾಗಿ ಗ್ರಹಿಸಿ ಸಂಭಾಷಣೆಗೆ ಅನುಕೂಲವಾದ ಸಾಹಿತ್ಯಗಳನ್ನು ಬರೆದು ಅವರನ್ನೂ ಉತ್ತಮ ಕಲಾವಿದರನ್ನಾಗಿ ರೂಪಿಸುವಲ್ಲಿ ಇಂದು ಅನೇಕ ಪುಸ್ತಕಗಳನ್ನು ರವಿ ಅಲೆವೂರಾಯರು ಹೊರತಂದಿದ್ದಾರೆ. ಇಂದು "ಯಕ್ಷಾರ್ಯ" ಎಂಬ ಈ ಗ್ರಂಥವೂ ಅದೇ ರೀತಿ ಯಕ್ಷ ಪ್ರಪಂಚಕ್ಕೆ ಉಪಯುಕ್ತವಾಗಲಿ" ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಸರಯೂ ಯುಕ್ತ ಪಕ್ಷದ ಸಭಾಕಾರ್ಯಕ್ರಮದಲ್ಲಿ ಹೇಳಿದರು.


ಕೊಂಚಾಡಿಯ ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರೀ ದೇವಸ್ಥಾನ, ತೋಟದ ಮನೆಯಲ್ಲಿ ಜರಗಿದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂತ್ರಿಗಳೂ ದೇವಳದ ಅಧ್ಯಕ್ಷರೂ ಆದ ಬಿ.ನಾಗರಾಜ ಶೆಟ್ಟರು "ಶ್ರೀದೇವಳದಲ್ಲಿ ಯಕ್ಷಗಾನದಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸರಯೂ ಸಂಸ್ಥೆಯ ಈ ಯಕ್ಷ ಪಕ್ಷ ವನ್ನು ನಡೆಸುತ್ತಿರುವುದು ಸಂತಸದ ವಿಷಯ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಸರಯೂ ರಜತ ಸಂಭ್ರಮ ವನ್ನು ಚೆನ್ನಾಗಿ ನಡೆಯಲಿ" ಎಂದರು.


ದೇವಳದ ಕೋಶಾಧಿಕಾರಿಗಳಾದ ರಮಾನಂದ ಭಂಡಾರಿಯವರು ಮಾತನಾಡಿ "ಸರಯೂ ನ ಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರುತ್ತೇನೆ. ಮತ್ತು ಇದಕ್ಕೆ ದೇವಳದ ಕಡೆಯಿಂದ ಸಂಪೂರ್ಣ ಸಹಕಾರವಿದೆ" ಎಂದರು.


ಮುಖ್ಯ ಅತಿಥಿಗಳಾಗಿ ಯಕ್ಷಮಂಜುಳಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್, ಆನಂದ ಶೆಟ್ಟಿ, ದಯಾನಂದ್, ವಿಪ್ರ ಸಮಾಗಮದ ಕಾರ್ಯದರ್ಶಿ ಪೂರ್ಣಿಮಾ ಶಾಸ್ತ್ರಿ, ಗೌತಂ ಭಂಢಾರಿ, ಮಧುಸೂದನ ಅಲೆವೂರಾಯ, ದೇವಳದ ಪ್ರಬಂಧಕ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.


ಸುಧಾಕರ ರಾವ್ ಪೇಜಾವರರು ನಿರ್ವಹಿಸಿದರೆ, ರಮ್ಯಾ ರಾಘವೇಂದ್ರ ಧನ್ಯವಾದವಿತ್ತರು. ಬಳಿಕ ಸರಯೂ ಮಕ್ಕಳ ಮೇಳದಿಂದ "ವರಾಹ- ನರಸಿಂಹ" ಬಯಲಾಟ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top