ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ

Upayuktha
0


ಪುತ್ತೂರು: ಅರ್ಬಿ ಕುಂತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ "ಶಿವಂ" ಸಭಾಂಗಣದ ಉದ್ಘಾಟನೆಯ ಪ್ರಯುಕ್ತ ಬುಧವಾರ (ಮೇ 21)  ಸಾಮೂಹಿಕ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣವನ್ನು ದೇವಾಲಯ ಸಂವರ್ಧನ ಸಮಿತಿ ಶ್ರೀ ಪಾರ್ವತಿ ಬಳಗದಿಂದ ನೆರವೇರಿಸಲಾಗಿದ್ದು, 25 ಮಂದಿ ಮಹಿಳೆಯರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.


ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ದೇವ್ಯಪರಾಧ ಕ್ಷಮಾಪಣ ಸ್ತೋತ್ರವನ್ನು ಹೇಳಿಕೊಡುವುದರೊಂದಿಗೆ, ಅರ್ಚನೆಯ ವಿಶೇಷತೆಯನ್ನು ತಿಳಿಸಿದರು. ಶ್ರೀಮತಿ ಪ್ರಭಾವತಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ಮಾಯಾ ಅತ್ರಿಜಾಲು ಹಾಗೂ ಅಲ್ಲಿನ ಅರ್ಬಿ ಶ್ರೀ ಮಹಾಲಿಗೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಕೃಷ್ಣಕುಮಾರ ಅತ್ರಿಜಾಲು ಮತ್ತು ಕಾರ್ಯದರ್ಶಿ ಪ್ರವೀಣ್  ಆಳ್ವ ಹಾಗೂ ಸದಸ್ಯರು  ಉಪಸ್ಥಿತರಿದ್ದು, ಕಾರ್ಯಕ್ರಮದ ವ್ಯವಸ್ಥೆಗೆ ಸಹಕರಿಸಿದರು.


ಈ ಸಂದರ್ಭ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಯವರ ಉಪಸ್ಥಿತರಿದ್ದು, ಆಶೀರ್ವದಿಸಿದ್ದು ಎಲ್ಲರಲ್ಲೂ ಧನ್ಯತೆಯ ಭಾವವನ್ನು ಮೂಡಿಸಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top