ಕವಿ, ತತ್ವಜ್ಞಾನಿ, ಲಿಂಗಾಯತ ಸಮುದಾಯದ ಸ್ಥಾಪಕ ಸಂತ ಬಸವಣ್ಣ

Upayuktha
0



ಬಳ್ಳಾರಿ:  ವೈಶಾಖ ಮಾಸದ ಮೂರನೇ ದಿನದಂದು ಬಸವ ಜಯಂತಿಯನ್ನು ಬಸವಣ್ಣನವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ. 2025ರ ಬಸವ ಜಯಂತಿಯನ್ನು ಏಪ್ರಿಲ್‌ 30 ರಂದು ಆಚರಿಸಲಾಯಿತು.

ಬಳ್ಳಾರಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣರವರು ಬಸವಣ್ಣನವರ ಬಗ್ಗೆ ಮಾತನಾಡಿ,  ಬಸವಣ್ಣನವರು 12 ನೇ ಶತಮಾನದ  ಕನ್ನಡ ಕವಿ ಮತ್ತು ತತ್ವಜ್ಞಾನಿಯಾಗಿದ್ದರು, ಲಿಂಗಾಯತ ಸಮುದಾಯದ ಸ್ಥಾಪಕ ಸಂತರಾಗಿದ್ದಾರೆ. ಬಸವಣ್ಣ ನವರು ತ್ರಿಮೂರ್ತಿ ದೇವರುಗಳಲ್ಲಿ ಪ್ರಮುಖನಾದ ಶಿವನ ಮಹಾನ್‌ ಆರಾಧಕರಾಗಿದ್ದರು. ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡ ಬಸವಣ್ಣನವರು ವೈಶಾಖ ಮಾಸದ ಮೂರನೇ ದಿನದಂದು ಜನಿಸಿದರು ಎನ್ನುವ ನಂಬಿಕೆಯಿದೆ ಎಂದು ಹೇಳಿದರು. .


ವಿಶ್ವಗುರು ಬಸವಣ್ಣನವರು 1131ರಲ್ಲಿ ಆಧುನಿಕ ಕರ್ನಾಟಕದ ಬಾಗೇವಾಡಿಯಲ್ಲಿ ಜನಿಸಿದರು. ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಾಕಷ್ಟು ಸಮಾಜ ವಿರೋಧಿ ಕೆಲಸಗಳನ್ನು ಪ್ರಶ್ನಿಸಿದ್ದರು. ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನೋದಯವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಂದನೇ ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ಯಾವಾಗಲೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಉತ್ತೇಜಿಸಿ ಕೊಂಡು ಬಂದವರಾಗಿದ್ದರು ಎಂದರು.


ಬಳ್ಳಾರಿ ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಹೊನ್ನೂರು ಸ್ವಾಮಿ (ವಂಡ್ರಿ), ಯಲ್ಲನಗೌಡ, ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಅಶೋಕ ಸಂಗನಕಲ್ಲು,ಚಾಗನೂರು ನಾಗರಾಜ, ಕಿರಣ್ ಕುಮಾರ್,ಬಸವ, ನಾಗರಾಜ, ಹೊನ್ನೂರು ವಾಲಿ, ರಾಮು, ಬಳ್ಳಾರಿ ಜೆಡಿಎಸ್ ಮಹಿಳಾ ಅಧ್ಯಕ್ಷರಾದ ಪುಷ್ಪಾ, ಭವಾನಿ, ವಿಜಯ, ಶಬಾನಾ, ರೆಹಮತ್, ವೃಂದಮ್ಮ, ರಾಜೇಶ್ವರಿ, ರೇಷ್ಮಾ, ಜಯಲಕ್ಷ್ಮೀ, ರಮಾದೇವಿ, ಬೃಂದಾವನಿ,ಆಶಾ, ಮತ್ತು ಇತರ ಕಾಯ೯ಕತ೯ರು ಸೇರಿದ್ದರು.



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top