ಸುರತ್ಕಲ್‌ನಲ್ಲಿ ಸಾಹಿತ್ಯ ಸಂಭ್ರಮ, ಕವಿಗೋಷ್ಠಿ

Chandrashekhara Kulamarva
0


ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ಮೇ 4 ರಂದು ಇಲ್ಲಿನ ವಿರಾಟ್ ಸಭಾ ಭವನದಲ್ಲಿ ಸಾಹಿತ್ಯ ಸಂಭ್ರಮ ಕವಿಗೋಷ್ಠಿ ನಡೆಸಲಾಯಿತು.


ಪ್ರಸಿದ್ಧ ಸಾಹಿತಿ ಡಾ. ಇಂದಿರಾ ಹೆಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕ.ಸಾ ಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಿ.ದಯಾಕರ್, ಮಂಗಳೂರು ಕ ಸಾ ಪ ಅಧ್ಯಕ್ಷ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಕೃಷ್ಣಮೂರ್ತಿ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮ ಹಾಗೂ ಗೀತ ಗಾಯನಗಳ ತರುವಾಯ ನಡೆದ ಕವಿಗೋಷ್ಠಿಯಲ್ಲಿ ವಿವಿಧ ರೀತಿಯ ಸ್ವರಚಿತ ಕಾವ್ಯ ವಾಚನ ನಡೆಯಿತು.


ರೇಮಂಡ್ ಡಿಕುನ್ಹಾ ತಾಕೊಡೆಯವರು ಸಕಾಲಿಕ ಕವನವನ್ನೂ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ್ ನೆಗಳಗುಳಿ ಇವರು ಸುಮಧುರ ಗಜಲ್ ವಾಚಿಸಿದರು. ಬಹುಮುಖ ಕಲೆಯ ಶಿಕ್ಷಕಿ ಪ್ರೇಮಾ ಆರ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ಅಧಿಕಾರಿ ಆಕೃತಿ ಭಟ್, ರಾಜೇಶ್ವರಿ ಎಚ್ ರವರು, ಪದ್ಮನಾಭ ಪೂಜಾರಿ ಕವನಗಳನ್ನು ವಾಚಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top