ಸುರತ್ಕಲ್ : ಪಠ್ಯ ಪುಸ್ತಕಗಳ ಜೊತೆಜೊತೆಯಲ್ಲಿ ಪರಾಮರ್ಶೆ ಗ್ರಂಥಗಳು, ಮೌಲಿಕ ಗ್ರಂಥಗಳ ಓದಿನೊಂದಿಗೆ ನಿರಂತರ ಮನನ ಅಗತ್ಯ, ಓದುವುದರಿಂದ ಬರವಣಿಗೆ ಸಾಧ್ಯ, ಗ್ರಂಥಾಲಯ ಎಂಬುದು ಸಂಶೋಧಕರಿಗೆ ಮಾಹಿತಿ ಕೇಂದ್ರವಾಗಿ ಬೆಳೆಯಬೇಕು ಎಂದು ಹಿರಿಯ ಸಾಹಿತಿ, ಸಂಶೋಧಕಿ, ಡಾ.ಇಂದಿರಾ ಹೆಗ್ಗಡೆಯವರು ನುಡಿದರು.
ಯಸ್.ಆರ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದದಾಸ ಕಾಲೇಜಿನ ಗ್ರಂಥಾಲಯ ವಿಭಾಗಕ್ಕೆ ಸುಮಾರು ಐವತ್ಮೂರು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳು ಹಾಗು ಎರಡು ಕಪಾಟನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಯಸ್.ಆರ್.ಹೆಗ್ಡೆ ಟ್ರಸ್ಟ್ ಕೋಶಾಧಿಕಾರಿಯಾದ ಡಾ. ಜ್ಯೋತಿ ಚೇಳ್ಯಾರು, ಯಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಬೆಳೆದು ಬಂದ ಬಗೆ, ಅದರ ಕಾರ್ಯ ಚಟುವಟಿಕೆಗಳನ್ನು ತಿಳಿಸಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಕೊಡುಗೆ ಯಾಗಿ ನೀಡಿದ ಪುಸ್ತಕಗಳ ಮಾಹಿತಿ ನೀಡಿ, ಇಂದಿರಾ ಹೆಗ್ಗಡೆಯವರ ಸಮಗ್ರ ಕೃತಿಗಳು ಇಲ್ಲಿದ್ದು ಸಂಶೋಧಕರಿಗೆ ಸಹಕಾರಿ ಯಾಗಲಿದೆ ಎಂದರು.
ತೃತೀಯ ಬಿ.ಎ ವಿದ್ಯಾರ್ಥಿನಿ ಮೇಘಾ ಡಾ.ಇಂದಿರಾ ಹೆಗ್ಗಡೆೆಯವರ ಕೃತಿಗಳ ಕುರಿತು ಮಾಹಿತಿ ನೀಡಿದರು. ಆಧುನಿಕ ಯುಗದಲ್ಲಿ ಪುಸ್ತಕಗಳಿಗೆ ತನ್ನದೇ ಆದ ಮಹತ್ವವಿದೆ ಪುಸ್ತಕಗಳನ್ನು ಓದಿ, ಜ್ಞಾನಾಭಿವೃದ್ಧಿ ಮಾಡಿಕೊಳ್ಳಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಹರೀಶ ಆಚಾರ್ಯ ಪಿ ಹೇಳಿದರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ನೀಲಪ್ಪ ವಿ, ಸಂಶೋಧಕ ಬೆನೆಟ್ ಅಮ್ಮನ್, ವಿವಿಧ ವಿಭಾಗ ಗಳ ಮುಖ್ಯಸ್ಥರು, ಉಪನ್ಯಾಸಕರು, ಯಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಂಥಪಾಲಕಿ ಡಾ.ಸುಜಾತಾ ಬಿ, ಧನ್ಯವಾದ ಹೇಳಿದರು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ ಆಳ್ವಾ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಡಾ. ಇಂದಿರಾ ಹೆಗ್ಗಡೆಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ