ಪಾಣಾಜೆ ಸುಬೋಧ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Chandrashekhara Kulamarva
0


ಪಾಣಾಜೆ: 2024-2025ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಗೆ 100% ಫಲಿತಾಂಶ ಬಂದಿರುತ್ತದೆ. ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಐದು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿರುತ್ತಾರೆ.


ಗುಡ್ಡೆ ಮನೆಯ ಈಶ್ವರ ನಾಯ್ಕ ಹಾಗೂ ಆನಂದಿ ಅವರ ಮಗಳು ಸುಶ್ಮಿತಾ 609 ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪಿದಾರದ ರಾಧಾಕೃಷ್ಣ ಹಾಗೂ ನಳಿನಿ ಅವರ ಪುತ್ರಿ ತೃಪ್ತಿ 601 ಅಂಕಗಳನ್ನು ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. ಬೊಳ್ಳಿಂಬಳದ ಅಬ್ದುಲ್ ರಜಾಕ್ ಹಾಗೂ ಅಬೀದಾ ಅವರ ಪುತ್ರಿ ನೆಫೀಸತ್ ಮಶ್ ರೂಫ 593 ಅಂಕಗಳನ್ನು ಪಡೆದು ಶಾಲೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.


ಗುವೆಲ್ ಗದ್ದೆಯ ದೇವಪ್ಪ ಮೂಲ್ಯ ಹಾಗೂ ಶಶಿಕಲಾ ಅವರ ಪುತ್ರಿ ರಚನಾ ಡಿ ಎಸ್ 567 ಅಂಕಗಳು, ದೇವಸ್ಯದ  ಶ್ರೀಧರ, ಸರೋಜಿನಿ ದಂಪತಿ  ಪುತ್ರಿ ಪ್ರೀತಿಕಾ 552 ಅಂಕಗಳು, ಪಾಲ್ತಮೂಲೆಯ ಶಶಿಧರ ಹಾಗೂ ಮಾಲತಿ ಅವರ ಪುತ್ರಿ ಅನಘಶಂಕರಿ 548 ಅಂಕಗಳು ಹಾಗೂ ಭರಣ್ಯದ ಕೊರಗಪ್ಪ ಗೀತಾ ದಂಪತಿ ಪುತ್ರಿ ತನ್ವಿ 533 ಅಂಕಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top