26 ಸುಮಂಗಲಿಯರ ಸಿಂಧೂರ ಅಳಿಸಿದ ಜಿಹಾದಿ ಉಗ್ರರಿಗೆ ಆಪರೇಶನ್ ಸಿಂಧೂರ ದ ಮೂಲಕ ಪ್ರತೀಕಾರವನ್ನು ಯಶಸ್ವಿಯಾಗಿ ನೀಡಲಾಯಿತೇನೋ ಸರಿ. ಅದಕ್ಕಾಗಿ ಭಾರತ ಸರಕಾರಕ್ಕೆ ಭಾರತೀಯ ಸೇನೆಗೆ ಜೈ ಎನ್ನೋಣ . ಆದರೆ ...ಆಪರೇಶನ್ ಸಿಂಧೂರ ಸಾಮಾನ್ಯ ಭಾರತೀಯರಿಗೆ ಹೇಗೆ ಪ್ರೇರಣೆಯಾಗಬಹುದೆಂದು ಯೋಚಿಸೋಣವೇ?
ನಮ್ಮ ನಡುವೆಯೇ ಕೆಲವು ಹಿಂದುಗಳೇ (ಮಠಾಧೀಶರುಗಳೂ ಸೇರಿದಂತೆ) ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೂ ನಮ್ಮ ಹುಡುಗಿಯರಿಗೆ ಸಿಂಧೂರ ಧಾರಣೆಯನ್ನು ನಿಷೇಧಿಸಿ ಅಕಾಲ ವಿಧವೆಯರಂತೆ ಮಾಡಲಾಗುತ್ತಿರುವುದನ್ನು ನಿಷೇಧಿಸಲು ಸಾಧ್ಯವಾದೀತೇ? ಅರ್ಥಾತ್ ಈ ಶಾಲೆಗಳಲ್ಲಿ ಸಿಂಧೂರ ಧಾರಣೆ ನಿಷೇಧ ತೆರವುಗೊಳಿಸಬಹುದೇ ?
ಇಂತಹ ಶಿಕ್ಷಣ ಸಂಸ್ಥೆಗಳು ಮತ್ತು ಕಾನ್ವೆಂಟ್ ಗಳಲ್ಲಿ ಕಲಿತು ಈಗಾಗಲೇ ಸಿಂಧೂರ ಧಾರಣೆಯನ್ನೇ ಬಿಟ್ಟಿರುವ ಲಕ್ಷಾಂತರ ಯುವತಿಯರು ಮತ್ತೆ ಎಲ್ಲರಿಗೂ ಕಾಣಿಸುವಂತೆ (ಅಣುರೂಪದಲ್ಲಿ ಅಲ್ಲ ) ಸಿಂಧೂರ ಧರಿಸಲು ಮನಸ್ಸು ಮಾಡಬಹುದೇ? ಅಥವಾ ಅವರ ಹೆತ್ತವರು ಪೋಷಕರು ಈ ಬಗ್ಗೆ ಕಡ್ಡಾಯ ಸೂಚನೆ ಕೊಡಬಹುದೇ ?
ಹಿಂದೂ ಹುಡುಗಿಯರು ಮಹಿಳೆಯರಿಗೆ ಸಿಂಧೂರ ಧಾರಣೆ ಆತ್ಮಗೌರವದ ಧರ್ಮ ಸಂಸ್ಕಾರ ಪಾಲನೆಯ ಅವಶ್ಯ ಕರ್ತವ್ಯ ಎಂದು ಈಗಲಾದರೂ ಮನದಟ್ಟಾಗಲು ಸಾಧ್ಯವಾದೀತೇ? ಸಿಂಧೂರ ಧರಿಸಿದ ಅದನ್ನು ವಿರೋಧಿಸುವ ಧರ್ಮಗಳ ಯುವಕರ ಪ್ರೀತಿಯ ನಾಟಕಗಳಿಗೆ ಲವ್ ಜಿಹಾದ್ ನ್ನು ಧಿಕ್ಕರಿಸುತ್ತೇವೆಂದು ನಮ್ಮ ಹುಡುಗಿಯರು ಸಂಕಲ್ಪಿಸಬಹುದೇ?
ಇದೆಲ್ಲ ಸಾಧ್ಯವಾದರೆ ಆಪರೇಶನ್ ಸಿಂಧೂರ ಭಾರತದಲ್ಲಿ ಸನಾತನ ನವ ಮನ್ವಂತರದ ಶುಭೋದಯಕ್ಕೆ ಕಾರಣವಾದೀತು.
- ಜಿ ವಾಸುದೇವ ಭಟ್ ಪೆರಂಪಳ್ಳಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ