ತಾಯಿ ಮಡಿಲು: ಮಕ್ಕಳ ಬದುಕಿನ ದಾರಿದೀಪ

Upayuktha
0


ತಾಯಿ ತನ್ನ ಮಕ್ಕಳ ಮೊದಲ ಗುರು ಸ್ನೇಹಿತೆ. ಅವಳು ತನ್ನ ಮಗುವನ್ನು ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತು ಹೃದಯದಿಂದ ಪೋಷಿಸುತ್ತಾಳೆ. ಮಕ್ಕಳು ಹುಟ್ಟಿನಿಂದಲೇ ಅವರ ಪ್ರತಿಯೊಂದು ಸನ್ನೆಯನ್ನು ಅರ್ಥಮಾಡಿಕೊಳ್ಳುತ್ತಾಳೆ. ಜೀವನದಲ್ಲಿ ಸರಿಯಾದ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತಾಳೆ. ತಾಯಿಗೆ ಧನ್ಯವಾದ ಹೇಳಲು,ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ತಾಯಂದಿರ ದಿನವನ್ನು ಆಚರಿಸುತ್ತೇವೆ. ತಾಯಂದಿರ ದಿನದ ಆಚರಣೆ ಮೊದಲು ಗ್ರೀಸ್ ದೇಶದಲ್ಲಿ ಪ್ರಾರಂಭವಾಯಿತು. ಈಗ ಅದನ್ನು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಬ್ಬ ತಾಯಿಯೂ ತನ್ನ ಜೀವನವನ್ನು ತನ್ನ ಮಗುವಿಗೆ ಸಮರ್ಪಿಸುತಾಳೆ ತಾಯಿಯ ತ್ಯಾಗದ ಆಳವನ್ನು ಅಳೆಯುವುದು ಯಾರಿಗೂ ಸಾಧ್ಯವಿಲ್ಲ. ತಾಯಂದಿರ ಅಮೂಲ್ಯವಾದ ಉಪಕಾರ ಪ್ರೀತಿಯನ್ನು ನಾವು ಮರುಪಾವತಿಸಲು ಸಾಧ್ಯವಿಲ್ಲ  ತಾಯಿಯನ್ನು ನೋಡಿಕೊಳ್ಳುವುದು ಗೌರವಿಸುವುದು ಪ್ರೀತಿಸುವುದು ನಮ್ಮ ಕರ್ತವ್ಯ. ಮೇ ತಿಂಗಳ ಎರಡನೇ ಭಾನುವಾರ ಪ್ರತಿ ವರ್ಷವೂ ತಾಯಂದಿರ ದಿನ ಆಚರಿಸುತ್ತೇವೆ.


ಮನೆಗೆ ಹಿಂದಿರುಗಿದಾಗ ಮೊದಲು ಹುಡುಕುವ ವ್ಯಕ್ತಿ ತಾಯಿ. ಅವಳು ತನ್ನ ಮಕ್ಕಳನ್ನು ಹುಟ್ಟಿನಿಂದ ಕೊನೆಯ ಉಸಿರು ಇರುವವರೆಗೂ ನೋಡಿಕೊಳ್ಳುತ್ತಾಳೆ. ನಮ್ಮ ಮೇಲೆ ತೋರಿಸುವ ಪ್ರೀತಿ ಮುದ್ದಿಸುವ ರೀತಿಗೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸುವುದಿಲ್ಲ. ತನ್ನ ಮಕ್ಕಳ ಪಾತ್ರ ಮತ್ತು ವ್ಯಕ್ತಿತ್ವವನ್ನು ರೂಪಿಸುವವಳು ತಾಯಿ. ತಾಯಿ ತನ್ನ ಮಕ್ಕಳ ಮೊದಲ ಶಿಕ್ಷಕಿ. ಪ್ರತಿಯೊಂದು ಕಷ್ಟದಲ್ಲೂ ತನ್ನ ಮಕ್ಕಳೊಂದಿಗೆ ನಿಂತು ಕಷ್ಟದ ಸಮಯದಲ್ಲಿ ಮಾರ್ಗದರ್ಶನ ನೀಡುತ್ತಾಳೆ. ತನ್ನ ಮಕ್ಕಳು ತಪ್ಪು ದಾರಿಯಲ್ಲಿ ಹೋದಾಗ ಅವರನ್ನು ತಡೆಯುವುದು ತಾಯಿ ಯಾವಾಗಲೂ ತನ್ನ ಮಕ್ಕಳು ಮುಂದೆ ಸಾಗಲು ಪ್ರೋತ್ಸಾಹಿಸುತ್ತಾಳೆ.


ಮಾತಿಗೆ ನಿಲುಕದ ಪದಗಳಿಗೆ ಎಟುಕದ ಪ್ರೀತಿ ಅವಳ ಪ್ರೀತಿಗೆ ಕಾರಣ ಬೇಕಿಲ್ಲ. ಕೋಟಿ ಕೋಟಿ ದೇವರನ್ನು ಹಿಂದಿಕ್ಕಿ ಕಾಣುವ ಮೊದಲ ದೇವತೆ ಅಮ್ಮ. ಹೊತ್ತು ಹೆತ್ತು ಸಾಕಿ ನಮಗಾಗಿ ತನ್ನ ಜೀವನವನ್ನು ಮುಡ್ಡಿಪಾಗಿಟ್ಟವಳು ಕೈ ತುತ್ತು ಕೊಟ್ಟು ಮಕ್ಕಳ ಸಂತೋಷ ಮತ್ತು ದುಃಖಗಳಲ್ಲಿ ಭಾಗಿಯಾದವಳು. ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ. ಅಮ್ಮನ ನಗುವಲ್ಲೇ ನನ್ನೆಲ್ಲ ಗೆಲುವು. ತಾಯಿಯ ಬದುಕು ಎಲ್ಲರಿಗಿಂತ ಭಿನ್ನ. ಯಾರು ತೀರಿಸಲು ಸಾಧ್ಯ ಹೆತ್ತವಳ ಋಣ? ನನಗೆ ಜೀವಕೊಟ್ಟು ಈ ಜಗತ್ತಿಗೆ ಪರಿಚಯಿಸಿ ಭವ್ಯತೆಯ ಮಡಿಲಿನಲ್ಲಿ ನನ್ನನ್ನೂ ಜೋಪಾನವಾಗಿ ಕಾಪಾಡಿದ ಅಮ್ಮ ನಿನಗೆ ಕೋಟಿ ಕೋಟಿ ನಮನ ನನ್ನ ಪ್ರೀತಿಯ ತಾಯಿಗೆ ಅಮ್ಮಂದಿರ ದಿನದ ಶುಭಾಶಯಗಳು.


-ಮಂಜುಳಾ ಪ್ರಕಾಶ್

ಆಳ್ವಾಸ್ ಕಾಲೇಜು, ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top