ಮೇ 23-25: ತೆಂಕನಿಡಿಯೂರಿನಲ್ಲಿ ಉಚಿತ ಬೇಸಿಗೆ ಶಿಬಿರ

Upayuktha
0


ಉಡುಪಿ: ತೆಂಕನಿಡಿಯೂರಿನ ಬಾಲ ಸಂಸ್ಕಾರ ಕೇಂದ್ರದವರು, ಶ್ರೀ ಕಾಳಿಕಾಂಬಾ ಭಜನಾ ಸಂಘ ಹಾಗೂ ಶ್ರೀ ದೇವಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ 23.05.2025 ರಿಂದ 25.05.2025ರ ತನಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ “ವಿಕಾಸ-2025”ನ್ನು ಹಮ್ಮಿಕೊಂಡಿದ್ದಾರೆ.


5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ವಿಶೇಷ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಭಕ್ತಿಗೀತೆ, ಭಾವಗೀತೆ, ಜನಪದ ಹಾಡು, ನೃತ್ಯ, ಚಿತ್ರಕಲೆ, ಗ್ರೀಟಿಂಗ್ಸ್ ತಯಾರಿ, ಕೊಲಾಜ್, ಫೇಸ್ ಪೈಂಟಿಂಗ್, ರಂಗ ತರಬೇತಿ, ಮೂಕಾಭಿನಯ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದೆಂದು ಕೇಂದ್ರದ ಪ್ರಕಟಣೆ ತಿಳಿಸಿದೆ. ಮೂರು ದಿನಗಳು ನಡೆಯುವ ಈ ವಿಶೇಷ ಶಿಬಿರದಲ್ಲಿ ಕೇವಲ 40 ಶಿಬಿರಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.


ಆಸಕ್ತರು 9844709515, 9964024066 ಈ ದೂರವಾಣಿಯನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top